ಬೆಳಗಾವಿ : ಬೆಳಗಾವಿ ನಗರದ ಚಾವಟ ಗಲ್ಲಿಯ ಶ್ರೀ ಲಕ್ಷೀ ಸಿಟಿ ಲೈಟ್ ಸಭಾಂಗಣದಲ್ಲಿ ಸಕ್ಸೆಸ್ ಸ್ಟಡಿ ಸೆಂಟರ್ (ಯಶಸ್ಸು ಅಧ್ಯಯನ ಕೇಂದ್ರ) ವನ್ನು ದಿನಾಂಕ 01/05/2024 ರಂದು ಬೆಳಿಗ್ಗೆ 10:00 ಗಂಟೆಗೆ ಉದ್ಘಾಟನೆ ಮಾಡಲಾಯಿತು.
ಬೆಂಗಳೂರಿನ ಮಾನಸಿಕ ಸಾಮರ್ಥ್ಯದ ಖ್ಯಾತ ಉಪನ್ಯಾಸಕ ಮಂಜುನಾಥ ಬಾಡಗಿ ಉದ್ಘಾಟಿಸಿ
ಮಾತನಾಡಿ , ಬೆಂಗಳೂರು ಧಾರವಾಡ ಮತ್ತು ಬೇರೆ ನಗರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಕೇಂದ್ರಗಳು ಸಾಕಷ್ಟು ಹೊಂದಿವೆ. ಬೆಳಗಾವಿ ನಗರದಲ್ಲಿ ಸಕ್ಸಸ್ ಸ್ಟಡಿ ಸೆಂಟರ್ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಿದರೆ ಯಶಸ್ಸು ಸಾಧ್ಯವಾಗುತ್ತದೆಂದು ಕರೆ ನೀಡಿದರು.
ಆರ್ ಎಲ್ ಎಸ್ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಶಶಿಕಾಂತ ತಾರದಾಳೆ ಮಾತನಾಡಿ, ಇಂತಹ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬೇಕಾದರೆ ಸತತ ಅಧ್ಯಯನ ಪ್ರಯತ್ನ,ಪರಿಶ್ರಮ ಇರಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಕ್ಸಸ್ ಅಧ್ಯಯನ ಕೇಂದ್ರದ ಮುಖ್ಯಸ್ಥ ರಮೇಶ ಶಿಡಲಾಳಿ ಮಾತನಾಡಿ, ಶೈಕ್ಷಣಿಕ ಚಿಂತನೆ ಮತ್ತು ಸಾಮಾಜಿಕ ಸೇವೆ ಸಲುವಾಗಿ ಈ ಸಕ್ಸಸ್ ಅಧ್ಯಯನ ಕೇಂದ್ರ ತೆರೆಯಲಾಗಿದೆ.ಈ ಭಾಗದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅನುಕೂಲವಾಗಲಿದೆಂದು ಹೇಳಿದರು.
ಸುಶಾಂತ ಯಕ್ಕುಂಡಿ ಸ್ವಾಗತಿಸಿದರು. ರಾಜು ಯಕ್ಕುಂಡಿ ವಂದಿಸಿದರು. ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾನಸಿಕ ಸಾಮರ್ಥ್ಯದ ತರಬೇತಿ ನೀಡಲಾಯಿತು. ತರಬೇತಿ ಕೇಂದ್ರದಲ್ಲಿ ನುರಿತ ಅನುಭವಿ ತಜ್ಞರಿಂದ ಪ್ರತಿ ತಿಂಗಳು ವಿವಿಧ ವಿಷಯಗಳ ಕುರಿತ ತರಬೇತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಈ ಕೆಳಕಂಡ ಮೊಬೈಲ್ ನಂಬರಿಗೆ ಕರೆ ಮಾಡಿ ಸಂಪರ್ಕಿಸಬಹುದು.
ರಮೇಶ ಶಿಡಲಾಳಿ-9481359211,ಸುಶಾಂತ ಯಕ್ಕುಂಡಿ–9742233558, ರಾಜು ಯಕ್ಕುಂಡಿ–9448758606