ಬೆಳಗಾವಿ:ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಇತರ ಸಂಬಂಧಿಕರೊಂದಿಗೆ ಸೇರಿ ತಮ್ಮ ಸ್ವಂತ ಊರಿನಲ್ಲಿ ಮಹಿಳೆ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಗಳಿ ಗ್ರಾಮದ ನಕುಶಾ ಸೈದಪ್ಪ ಗಡಾದೆ ಎಂಬುವವರು ಐಗಳಿ ಠಾಣೆಗೆ ತಮ್ಮ ಮೇಲೆ ಕಿರುಕುಳ ಹಾಗೂ ಹಲ್ಲೆ ನಡೆದಿರುವ ಬಗ್ಗೆ ದೂರು ಸಲ್ಲಿಸಿದ್ದು ಐಪಿಸಿ 307 ಸೇರಿ ಇತರ ಕಲಂಗಳ ಅಡಿ 14ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಐಗಳಿ ಗ್ರಾಮದ ಸಾರ್ವಜನಿಕ ಕುಡಿಯುವ ಬಾವಿ ನೀರಿನ ಬಳಕೆ, ಸ್ಥಳೀಯ ಗ್ರಾ.ಪಂ. ಅನುಮತಿ ಮೇರೆಗೆ ಹೊಸ ಮನೆ ಕಟ್ಟುವ ಕೆಲಸಕ್ಕೆ ಬಳಕೆ ಮಾಡುವಾಗ, ಆರೋಪಿತರು ಕ್ಯಾತೆ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ರವೀಂದ್ರ ಗಡಾದೆ ಎಂಬುವವರು ಪೊಲೀಸ್ ಇಲಾಖೆಯಲ್ಲಿದ್ದು, ಈ ಪ್ರಕರಣದಲ್ಲಿ ನೊಂದ ಕುಟುಂಬದೊಂದಿಗೆ ಬಹಳ ದಿನಗಳಿಂದ ಅಸಮಧಾನ ಹೊಂದಿದ್ದಾರೆ. ಅಕ್ರಮವಾಗಿ ಗುಂಪು ಕಟ್ಟಿಕೊಂಡು ಅಶ್ಲೀಲ ಪದಗಳನ್ನು ಬಳಸಿ ಹಲ್ಲೆ ಮಾಡಿದ್ದಾರೆ ಎಂದು ಎಫ್ ಐಆರ್ ನಲ್ಲಿ ನಮೂದಾಗಿದೆ. ಘಟನೆ ಎಪ್ರೀಲ್ 12ಕ್ಕೇ ಮಧ್ಯಾಹ್ನ ನಡೆದಿದ್ದು, ಏ.20ಕ್ಕೆ ರವೀಂದ್ರ ಗಡಾದಿ ಅವರಯ ಸಹಿತ 14ಜನರ ಮೇಲೆ ಐಗಳಿ ಠಾಣೆಯಲ್ಲಿ FIR ದಾಖಲಾಗಿದೆ.
ಕೋಟ್…
ನಮ್ಮ ದೂರದ ಸಂಬಂಧಿ ಆಗಿರುವ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಅವರು ನಮ್ಮ ವಿರುದ್ಧ ದ್ವೇಷ ಕಾರುತ್ತ ಬಂದಿದ್ದಾರೆ. ಗುಂಪು ಕಟ್ಟಿಕೊಂಡು ಅಶ್ಲೀಲ ಪದ ಬಳಸಿ ಸಹ ಹಲ್ಲೆ ಮಾಡಿದ್ದಾರೆ. ತತಕ್ಷಣ ಪೊಲೀಸರು ಅವರನ್ನು ಬಂಧಿಸಬೇಕು, ಸರಕಾರ ಶಿಸ್ತು ಕ್ರಮ ಕೈಗೊಳ್ಳಬೇಕು.
– ನಕುಶಾ ಸೈದಪ್ಪ ಗಡಾದೆ