ಬೆಳಗಾವಿ : ಡಾ.ಬಿ.ಆರ್. ಅಂಬೇಡ್ಕರ್ ಅವರು ನಿಮ್ನ ವರ್ಗಗಳ ಶೋಷಣೆ, ಅಸಮಾನತೆ ಹೋಗಲಾಡಿಸಲು ಜೀವನವಿಡೀ ಪ್ರಯತ್ನಿಸಿದ್ದರು. ಸಮಾಜದ ಈ ಕೆಳ ವರ್ಗಗಳ ಸರ್ವಾಂಗಿಣ ಅಭಿವೃದ್ಧಿಗೆ ಅವರ ಕಳಕಳಿ ಗಮನಾರ್ಹವಾದ ಎಂದು ಬೆಳಗಾವಿ ಜಿಎ ಸಂಯುಕ್ತ ಪದವಿಪೂರ್ವ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್. ಎಸ್. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಎ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರವಿವಾರ ನಡೆದ ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಶೋಷಿತ ಸಮುದಾಯದ ಜೊತೆ ಕೆಳ ವರ್ಗದ ಎಲ್ಲಾ ಸಮಾಜಗಳನ್ನು ಮುಂದೆ ತರಲು ಜೀವನವಿಡಿ ಶ್ರಮಿಸಿದ್ದರು. ಅವರ ಕಳಕಳಿ ಅನುಕರಣೀಯ ಎನಿಸಿದೆ. ಇಂದು ಎಲ್ಲಾ ಸಮಾಜದಲ್ಲಿ ಆಗಿರುವ ಬದಲಾವಣೆಗಳಿಗೆ ಅಂಬೇಡ್ಕರ್ ಅವರೇ ಕಾರಣರಾಗಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಹೋರಾಟಗಳಿಗೆ ಅತ್ಯಂತ ದೊಡ್ಡ ಇತಿಹಾಸ ಇದೆ. ಅಂದಿನ ರಾಜಕೀಯ ನಾಯಕರು ಸಹಾ ಅಂಬೇಡ್ಕರ್ ವಿಚಾರಗಳನ್ನು ಒಪ್ಪಿಕೊಂಡಿದ್ದರು. ಇಂದು ಕಾಣುತ್ತಿರುವ ಈ ಸಮಾಜದ ಬದಲಾವಣೆಗಳಿಗೆ ಅಂಬೇಡ್ಕರ್ ಮುಖ್ಯ ಕಾರಣರು ಎಂದು ಹೇಳಿದರು.
ನಮ್ಮಲ್ಲಿರುವ ಮಾನಸಿಕ ಕೀಳರಿಮೆ ತೆಗೆಯಲು ಪ್ರಯತ್ನಿಸಬೇಕು. ನಾನು ಕೆಳವರ್ಗದವನು. ನನ್ನಂದ ಏನು ಸಾಧ್ಯವಿಲ್ಲ ಎಂಬ ಕೀಳರಿಮೆಯಿಂದ ನಾವು ಹೊರ ಬರಬೇಕು. ಈ ಮೂಲಕ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡರೆ ದೇಶ ಇನ್ನಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಉಪ ಪ್ರಾಚಾರ್ಯ ಸಿದ್ದರಾಮ ಗದಗ, ಆಜೀವ ಸದಸ್ಯ ಮಹಾದೇವ ಬಳಿಗಾರ ಉಪಸ್ಥಿತರಿದ್ದರು.
ಕಾವೇರಿ ಪಟ್ಟಣ ಅಂಬೇಡ್ಕರ್ ಕುರಿತು ಮಾತನಾಡಿದರು.
ಆರ್.ಎಂ.ಮಗದುಮ ನಿರೂಪಿಸಿದರು. ಸಿ.ಪಿ.ದೇವರುಷಿ ವಂದಿಸಿದರು.