ಶಿರಸಿ :
ಇಂದು ದ್ಪಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕಾಲೇಜಿಗೆ ಹೋಗುವವರಿಗಿಂತ ಹೆಚ್ಚು (ಒಂದಿಬ್ಬರಿಗಿಂತ ಕಡಿಮೆ)ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಹೋಗದೇ 95.70% ಅಂಕ ಬಾಚಿಕೊಂಡಿದ್ದಾನೆ.
ಆದರೂ ಬೇಸರವಿದೆ. ಲೆಕ್ಕತಪ್ಪಿಲ್ಲ. ಗ್ರಾಮರ್ ತೆಗೆಯೋ ಹಾಗೇ ಇಲ್ಲ. 97%ಬರಬೇಕಿತ್ತು. ಎಂಬುದು ದೊಡ್ಡ ತಕರಾರು. ಹೋಗಲಿ ಬಿಡು ಎಂದು ದೊಡ್ಡಮ್ಮ ಸಮಾಧಾನಪಡಿಸಿದರೂ ಸುತಾರಾಂ ತಲೆಬಾಗಿಲ್ಲ ಇನ್ನೊಂದು ಪರ್ಸೆಂಟ್ ಪಡೆಯುವ ಹಠ.
ಎಲ್ಲರಂತೆ ಕಾಲೇಜಿಗೆ ಹೋಗದೇ ಆಟದತ್ತಲೇ ನೋಟ ಹರಿಸಿದ್ದ. ತಿಂಗಳಲ್ಲಿ ಐದಾರು ದಿನ ತೋಟದ ಕೆಲಸ. ಊರಿಗೆ ಹೋದಾಗ ಶಿರಸಿಯ ಚೈತನ್ಯ ಕಾಲೇಜಿಗೆ ಹೋಗಿ ಶಿಕ್ಷಕರಿಗೆ ನಾನೇ ಶಶಾಂಕ ಹೆಗಡೆ ಎಂದು ಆಗಾಗ ಮುಖದ ನೆನಪು ಮಾಡಿಸುತ್ತಿದ್ದ.
ಪ್ರಥಮ ಪಿಯು ಇದ್ದಾಗ 98%ಅಂಕ. ಸಹಪಾಠಿಗಳು ಎಂದುಕೊಂಡಿದ್ದು, ಶಿಕ್ಷಕರಿಗೆ ಬಕೆಟ್ ಹಿಡಿದಿದ್ದಾನೆ ಎಂದೇ ಹೇಳುತ್ತಿದ್ದರು.
ಈತ ರಾಜ್ಯಮಟ್ಟದ ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದಾನೆ. ಎಲೆಕ್ಟ್ರಾನಿಕ್ ಸಿಟಿಯ ಪುಟ್ಟ ರೂಂನಲ್ಲಿ ವಾಸ. ಹೋಟೆಲ್ ಊಟ. ಒಬ್ಬ ತರಬೇತುದಾರನ ಕೈಕೆಳಗೆ ತರಬೇತಿ. ತಿಂಗಳಿಡೀ ಅಲ್ಲಿ ಇಲ್ಲಿ ಆಟಕ್ಕಾಗಿ ರಾಜ್ಯ ಸುತ್ತಾಟ. ಎರಡು ಬಾರಿ ರಾಷ್ಟ್ರೀಯ ಮಟ್ಟದಲ್ಲೂ ಆಡಿ, ಅಲ್ಪಾಂತರದಲ್ಲಿ ಜಯದ ಗೆರೆ ದಕ್ಕಲಿಲ್ಲ.
ಇವುಗಳ ಮಧ್ಯೆ ತನಗೆ ಪ್ರವೇಶ ಕೊಟ್ಟಿದ್ದ ಚೈತನ್ಯ ಕಾಲೇಜಿಗೆ ಆಗಾಗ ಭೇಟಿ. ಅಲ್ಲಿ ನಿರಂತರ ಕಲಿಯುವ ಮಕ್ಕಳಿಗಿಂತ ಹೆಚ್ಚು ಅಂಕ ಸಂಪಾದನೆ. ಅಳುಕಿನಿಂದಲೇ ಹಾಜರಾತಿ ಇಲ್ಲದೇ ಪ್ರವೇಶ ನೀಡಲಾಗದು ಎಂದು ಪ್ರವೇಶ ನೀಡಿದ ಶಿಕ್ಷಣ ಸಂಸ್ಥೆಗೊಂದು ರಾಜ್ಯಮಟ್ಟದ ಬ್ಯಾಡ್ಮಿಂಟನ್ ಆಟಗಾರ ನಮ್ಮಲ್ಲಿದ್ದಾನೆ ಎಂಬ ಸ್ಥಾನಮಾನದ ಬ್ರಾಂಡ್ ವ್ಯಾಲ್ಯೂ ತಂದುಕೊಟ್ಟ ಹಿರಿಮೆ.
ಜತೆಯಲ್ಲೇ ತಂದೆಗೂ ಕೃಷಿಯ ಕೆಲಸಕ್ಕೆ ಸಾಥ್. ಇವುಗಳ ಮದ್ಯೆ ಇಟಗಿ ದೇವಾಲಯದಲ್ಲಿ ಚಂಡೆ ಹೊಡೆಯುವ ಕಾಯಕ ಮೂಲಕ ರಾಮೇಶ್ವರನ ಸೇವೆಗೂ ಹೆಗಲುಕೊಡುತ್ತಿರುವುದು ಗ್ರೆಟ್.