ಬೆಳಗಾವಿ :
ಬೆಳಗಾವಿಯ ಸತ್ ಗುರು ಬಟ್ಟೆ ಮಳಿಗೆಗೆ ಸತ್ತ ಗುರು ಎಂಬ ಫಲಕವನ್ನು ಅಳವಡಿಸಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಕೊನೆಗೂ ಎಚ್ಚೆತ್ತುಕೊಂಡ ಅಂಗಡಿ ಮಾಲಿಕರು ಇದೀಗ ಫಲಕವನ್ನೇ ಬದಲಾಯಿಸಿದ್ದಾರೆ.
ಅಂಗಡಿ ಮಾಲೀಕರು ಅಂಗಡಿಯ ಹೆಸರನ್ನು ಗೂಗಲ್ ನಲ್ಲಿ ಟ್ರಾನ್ಸ್ ಲೇಟ್ ಮಾಡಿ ಕನ್ನಡಕ್ಕೆ ಭಾಷಾಂತರ ಮಾಡಿ ಅದರಲ್ಲಿ ತೋರಿಸಲಾದ ಅಕ್ಷರಗಳನ್ನೇ ಬೋರ್ಡಿನಲ್ಲಿ ಮುದ್ರಿಸಿ, ಅಳವಡಿಕೆ ಮಾಡಿಕೊಂಡಿದ್ದರು. ಇದರಿಂದ ಕನ್ನಡ ಅಕ್ಷರಗಳ ಕಗ್ಗೊಲೆ ಆಗಿತ್ತು. ಇನ್ನೊಂದೆಡೆ ಕೆಟ್ಟ ಅರ್ಥ ಬರುವ ಪದಗಳ ಬಳಕೆ ಆಗಿತ್ತು.
ಬೆಳಗಾವಿಯ ಈ ಅಂಗಡಿಯ ಫಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊನೆಗೂ ಇದೀಗ ಅಂಗಡಿ ಮಾಲೀಕ ಸತ್ತ ಗುರು ಎಂದು ಅಳವಡಿಕೆ ಮಾಡಿದ್ದ ಫಲಕವನ್ನು ತೆರವುಗೊಳಿಸಿ ಸತ್ ಗುರು ಎಂದು ಬರೆಸಿ ಹೊಸಫಲಕ ಅಳವಡಿಸಿದ್ದಾರೆ.