ಜನ ಜೀವಾಳ ವಿಶೇಷ :ಬೆಂಗಳೂರು /ಬೆಳಗಾವಿ :
ಒಂದು ಕಡೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮತ್ತೊಂದು ಕಡೆ ಮೌಲ್ಯಂಕನ ಪರೀಕ್ಷೆ.. ಇದು ಶಿಕ್ಷಕರನ್ನು ತೀವ್ರ ಗೊಂದಲಕ್ಕೆ ತಳ್ಳಿದೆ.. ಈ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡಿ ಎಂದು ಶಿಕ್ಷಕರು ಇದೀಗ ಶಾಲಾ ಶಿಕ್ಷಣ ಮಂಡಳಿಯನ್ನು ಕೋರುತ್ತಿದ್ದಾರೆ.
SSLC ದಿನಕ್ಕೆ 20 paper ಮೌಲ್ಯಮಾಪನ ಮಾಡೋದೇ ಕಷ್ಟ. ದಿನಕ್ಕೆ 40ಪತ್ರಿಕೆ ಚೆಕ್ ಮಾಡಲು ಹೇಗೆ ಸಾಧ್ಯ ?:
ಇದು ಶಿಕ್ಷಕರ ಪ್ರಶ್ನೆ. 29 ಮತ್ತು 31 ರಜೆ ಇದೆ. 30 ಪರೀಕ್ಷೆ ಇದೆ. ದಿ. 1 ಮತ್ತು 2 ರಂದು 2 ದಿವಸದಲ್ಲಿ ಮಾಡಲು ಸಾಧ್ಯನಾ ?
ಸೂಚನೆಯಾದರೂ ಏನು ?
2023-24 ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ(Summative Assessment(SA-2) ಕಾರ್ಯವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ 08:11.03.2024 2 12.03.2024 500 ರನ್ವಯ ದಿನಾಂಕ:25.03.2024 ರಿಂದ 28.03.2024 ರವರೆಗೆ ನಡೆಸಲಾಗುತ್ತಿದೆ.
5. 8 ಮತ್ತು 9ನೇ ತರಗತಿಗಳ ಮೌಲ್ಯಾಂಕನಕ್ಕೆ ನೀಡಲಾದ ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದಂತೆ ವಿಷಯವಾರು ಕೀ ಉತ್ತರಗಳ ಪ್ರತಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್ನಲ್ಲಿ ಲಭ್ಯ ಮಾಡಲಾಗುತ್ತಿದ್ದು, ಈಗಾಗಲೇ ಉಲ್ಲೇಖ(1) ರ ಸರ್ಕಾರಿ ಆದೇಶದಲ್ಲಿ ತಿಳಿಸಿರುವಂತೆ ಮೌಲ್ಯಮಾಪನ ಕಾರ್ಯವನ್ನು ಬ್ಲಾಕ್ ಹಂತದಲ್ಲಿ ಅಂತರ್ ಕ್ಲಸ್ಟರ್ ವಾರು ನಿರ್ವಹಿಸಬೇಕಿರುತ್ತದೆ. ಅದರಂತೆ 5 ನೇ ತರಗತಿಯ ಮೌಲ್ಯಾಂಕನವು ದಿನಾಂಕ:26.03.2024 ರಂದು ಪೂರ್ಣಗೊಂಡಿರುವುದರಿಂದ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 80 ಉತ್ತರ ಪತ್ರಿಕೆಗಳಂತೆ ಮೌಲ್ಯಮಾಪನ ಕಾರ್ಯವನ್ನು ದಿನಾಂಕ:31.03.2024 ರೊಳಗೆ ಪೂರ್ಣಗೊಳಿಸುವುದು ಹಾಗೂ 8 ಮತ್ತು 9ನೇ ತರಗತಿಯ ಮೌಲ್ಯಾಂಕನವು ದಿನಾಂಕ:28.03.2024 ರಂದು ಪೂರ್ಣವಾಗುತ್ತಿದ್ದು, 8ನೇ ತರಗತಿಯ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 40 ಉತ್ತರ ಪತ್ರಿಕೆಗಳನ್ನು ಹಾಗೂ 9ನೇ ತರಗತಿಯ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 40 ಉತ್ತರ ಪತ್ರಿಕೆಗಳಂತೆ ಮೌಲ್ಯಮಾಪನವನ್ನು ದಿನಾಂಕ:02.04.2024 ರ ಒಳಗಾಗಿ ಪೂರ್ಣಗೊಳಿಸುವುದು ಹಾಗೂ ಎಲ್ಲಾ ತರಗತಿಗಳ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳನ್ನು ಶಾಲೆಗಳಿಗೆ ಮರು ರವಾನೆ ಮಾಡುವುದು.
ಶಾಲಾ ಮುಖ್ಯ ಶಿಕ್ಷಕರು/ಪ್ರಾಂಶುಪಾಲರು ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಗ್ರೇಡ್ ಗಳಾಗಿ ಪರಿವರ್ತಿಸಿ ಎಸ್.ಎ.ಟಿ.ಎಸ್ ನಲ್ಲಿ ನಮೂದಿಸುವುದು ಹಾಗೂ ಸಮುದಾಯದತ್ತ ಶಾಲಾ ದಿನದಂದು ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ನೀಡುವುದು. ಈ ಸಂಬಂಧ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮವಹಿಸಲು ತಿಳಿಸಿದೆ.
—–
ಶಿಕ್ಷಕರು ಯಂತ್ರಗಳೋ.. ಎನ್ನುವುದು ಇದೀಗ ಎಲ್ಲರನ್ನು ಕಾಡುತ್ತಿರುವ ಗಂಭೀರವಾದ ಪ್ರಶ್ನೆಯಾಗಿದೆ. ಶಿಕ್ಷಕರಿಗೆ ಈ ರೀತಿ ಹತ್ತು ಹಲವು ಕೆಲಸಗಳನ್ನು ನೀಡಿದರೆ ಅವರು ಮಾಡುವುದಾದರೂ ಏನು ?ಗುಣಮಟ್ಟದ ಶಿಕ್ಷಣವನ್ನು ಕೊಡುವುದಾದರೂ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ ?ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದೀಗ ಶಿಕ್ಷಕರ ಮೇಲೆ ಹತ್ತಾರು ಆದೇಶಗಳನ್ನು ಹೇರುವ ಮೂಲಕ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಶಿಕ್ಷಕರು ಸಹ ಮನುಷ್ಯರೇ ಆಗಿದ್ದಾರೆ. ಅವರಿಗೂ ಬೇಸರ ತೊಂದರೆ ನೋವುಗಳು ಇರುತ್ತವೆ. ಇದನ್ನು ಶಾಲಾ ಶಿಕ್ಷಣ ಮಂಡಳಿ ಗಮನಿಸಬೇಕು. ಶಿಕ್ಷಕರ ಮೇಲೆ ಅನಗತ್ಯವಾಗಿ ಜವಾಬ್ದಾರಿ ವಹಿಸುವ ಕೆಲಸವನ್ನು ಇನ್ನಾದರೂ ಬಿಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಶಾಲಾ ಶಿಕ್ಷಣ ಮಂಡಳಿ ಇನ್ನಾದರೂ ಎಚ್ಚೆತ್ತು ಕೊಳ್ಳಬೇಕಾಗಿದೆ.- ರಾಮು ಗುಗವಾಡ