ದಾವಣಗೆರೆ : ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ದಾವಣಗೆರೆ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರಾದ ಎ.ಸಿ. ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ನಗರದ ಚೇತನ ಹೋಟೆಲ್ ಸಭಾಂಗಣದಲ್ಲಿ ಮಾರ್ಚ್ 23 ರ ಶನಿವಾರ ಸಂಜೆ 5 ಗಂಟೆಗೆ ಜರುಗಿದ ಸಭೆಯಲ್ಲಿ ಸರ್ವಾನೂಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ದಾವಣಗೆರೆ ಕನ್ನಡಿಗ ಪತ್ರಿಕೆ ಸಂಪಾದಕರಾದ ರವಿ. ಆರ್, ಪ್ರಧಾನ ಕಾರ್ಯದರ್ಶಿಯಾಗಿ ದಾವಣಗೆರೆ ಟೈಮ್ಸ್ ಪತ್ರಿಕೆ ಸಂಪಾದಕರಾದ ಜೆ.ಎಸ್. ವೀರೇಶ್, ಉಪಾಧ್ಯಕ್ಷರು ಗಳಾಗಿ ಶಿವಮೊಗ್ಗ ಮಲ್ನಾಡ ವಾಣಿ ಪತ್ರಿಕೆ ಸಂಪಾದಕರಾದ ಕೆ. ಏಕಾಂತಪ್ಪ, ವ್ಯವಸ್ಥಾಪಕ ಸಂಪಾದಕರಾದ ಕೆ. ಚಂದ್ರಣ್ಣ, ದಾವಣಗೆರೆ ಇಮೇಜ್ ಪತ್ರಿಕೆ ಎ. ಫಕ್ರುದ್ದೀನ್, ಜನಸ್ಪಂದನ ಪತ್ರಿಕೆ ಸಂಪಾದಕರಾದ ಕೆ. ಉಮೇಶ್, ಕನ್ನಡ ಭಾರತಿ ಪತ್ರಿಕೆ ಸಂಪಾದಕರಾದ ಮಲ್ಲಿಕಾರ್ಜುನ ಕಬ್ಬೂರ್, ನಗರವಾಣಿ ಪತ್ರಿಕೆಯ ಸಂಪಾದಕರಾದ ಬಿ.ಎನ್. ಮಲ್ಲೇಶ್, ಖಜಾಂಚಿಯಾಗಿ ಹರಿಹರ ನಗರವಾಣಿ ಪತ್ರಿಕೆಯ ಸಂಪಾದಕರಾದ ಸುರೇಶ್ ಕುಣೆಬಳಕೆರೆ, ಕಾರ್ಯದರ್ಶಿಗಳಾಗಿ
ಪ್ರಜಾ ಮಿಡಿತ ಪತ್ರಿಕೆಯ ಸಂಪಾದಕರಾದ ಎಸ್.ಗೋವಿಂದರಾಜ್, ಪ್ರಥಮ ಹೆಜ್ಜೆ ಪತ್ರಿಕೆ ಸಂಪಾದಕರಾದ ಮಂಜನಾಯ್ಕ್, ಜನಕ್ರಾಂತಿ ಪತ್ರಿಕೆ ಸಂಪಾದಕರಾದ ಕೆ.ಆರ್. ಗಂಗರಾಜ್, ಸಹ ಕಾರ್ಯದರ್ಶಿಗಳಾಗಿ ದಾವಣಗೆರೆ ಪಬ್ಲಿಕ್ ವಾಯ್ಸ್ ಪತ್ರಿಕೆಯ ಎ.ಸಿ. ನಾಗರಾಜ್, ಇಂದಿನ ಸುದ್ದಿ ಪತ್ರಿಕೆಯ ವಿ.ಎಂ. ಅನಿಲ್ ಕುಮಾರ್, ಜಂಟಿ ಕಾರ್ಯದರ್ಶಿಗಳಾಗಿ ದಾವಣಗೆರೆ ಶಿವ ಪತ್ರಿಕೆ ಸಂಪಾದಕ ಹೆಚ್. ನಿಂಗರಾಜು, ಶರಣ ಕ್ರಾಂತಿ ಪತ್ರಿಕೆ ಸಂಪಾದಕ ಕೆ.ಸಿ. ಮಂಜುನಾಥ್, ಸಂಘಟನಾ ಕಾರ್ಯದರ್ಶಿಗಳಾಗಿ ನಮ್ಮ ಗುರಿ ಪತ್ರಿಕೆಯ ಜಿ. ಎಂ. ಮಂಜುನಾಥ್, ನಗರ ಮಿಡಿತ ಪತ್ರಿಕೆ ಸಂಪಾದಕ ಜಿ.ಎಸ್. ವಸಂತ್ ಇವರುಗಳು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ನನ್ನ ಮಿತ್ರ ಪತ್ರಿಕೆ ಸಂಪಾದಕ ಅಣಬೂರು ಮಠದ ಕೊಟ್ರೇಶ್, ಜಗಳೂರು ವಾಯ್ಸ್ ಪತ್ರಿಕೆಯ ಸಂಪಾದಕಿ ಕರಿಯಮ್ಮ,ಜನತಾ ಬಂಧು ಪತ್ರಿಕೆ ಸಂಪಾದಕ ಮಾರಪ್ಪ, ನಂದ ಎಕ್ಸ್ ಪ್ರೆಸ್ ಪತ್ರಿಕೆ ಸಂಪಾದಕ ಎನ್. ನಂದನ್ ಕುಮಾರ್, ಪೊಲಿಟಿಕಲ್ ಪವರ್ ಪತ್ರಿಕೆಯ ಯು. ಮಂಜುನಾಥ್, ಕ್ರಾಂತಿ ಕೇಸರಿ ಪತ್ರಿಕೆಯ ಸಂಪಾದಕ ಸರ್ಫ್ ರಾಜ್ ಅಲಿಖಾನ್, ಜಿಲ್ಲಾ ಸಮಾಚಾರ ಪತ್ರಿಕೆಯ ಸಂಪಾದಕ ಎಚ್. ವೆಂಕಟೇಶ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿರುವ ರಾಜ್ಯಾಧ್ಯಕ್ಷರಾದ ಎ.ಸಿ. ತಿಪ್ಪೇಸ್ವಾಮಿಯವರು ದಾವಣಗೆರೆ ಜಿಲ್ಲಾ ಘಟಕಕ್ಕೆ ಒಮ್ಮತದಿಂದ ಆಯ್ಕೆಯಾಗಿರುವ ಎಲ್ಲಾ ಪದಾಧಿಕಾರಿಗಳಿಗೆ ಕೇಂದ್ರ ಸಂಘದ ವತಿಯಿಂದ ಅಭಿನಂದನೆಗಳನ್ನು ತಿಳಿಸಿದ್ದಾರೆ.