ಬೆಳಗಾವಿ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ಗೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಗೋ ಬ್ಯಾಕ್ ಶೆಟ್ಟರ್’ ಅಭಿಯಾನ ಜೋರಾಗುತ್ತಿದೆ. ಇದೇ ಮೊದಲ ಬಾರಿ ಬೆಳಗಾವಿ ನಗರದಲ್ಲಿ ಶೆಟ್ಟರ್ ವಿರೋಧಿ ಬ್ಯಾನರ್ಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯರಿಗೆಯೇ ಟಿಕೆಟ್ ನೀಡಲು ಒತ್ತಾಯಿಸಲಾಗಿದೆ. ಈ ನಡುವೆ ಟಿಕೆಟ್ ತಮಗೇ ಸಿಗಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗುತ್ತಿದ್ದಂತೆ ಅವರ ವಿರುದ್ಧ ಬಿಜೆಪಿ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ ಜೋರಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಚರ್ಚೆ ನಡೆಯುತ್ತಿದ್ದು, ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಜೆಪಿ ಮುಖಂಡರು ಹೊರಗಿನವರಿಗೆ ಟಿಕೆಟ್
ನೀಡುವುದನ್ನು ವಿರೋಧಿಸಿ ಸಭೆಯನ್ನೂ
ನಡೆಸಿದ್ದಾರೆ. ಆದರೆ ಈ ಸಭೆ ಕುರಿತಂತೆ ಗೇಲಿ
ಮಾಡಿದ್ದ ಶೆಟ್ಟರ್, 17 ಲಕ್ಷ ಮತದಾರರಿರುವಾಗಿ
7-8 ಮುಖಂಡರು ಯಾವ ಲೆಕ್ಕ ಎನ್ನುವ ರೀತಿಯಲ್ಲಿ ಪ್ರಶ್ನಿಸಿದ್ದರು. ಇದೀಗ ಶೆಟ್ಟರ್
ವಿರುದ್ಧ ಎಲ್ಲೆಡೆ ಪ್ರತಿಭಟನೆ, ಪೋಸ್ಟರ್ ಅಭಿಯಾನ ಶುರುವಾಗಿದೆ. #Gobackshettar
ಎನ್ನುವ ಅಭಿಯಾನ ಜೋರಾಗಿದೆ.
ಬೆಳಗಾವಿ ನಗರದ ವಿವಿಧೆಡೆ ಬುಧವಾರ ಮತ್ತಷ್ಟು ಬ್ಯಾನರ್ ಗಳು ಕಾಣಿಸಿಕೊಂಡಿವೆ.