ಬೆಳಗಾವಿ :
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ ಕಾರ್ಡುಗಳು ಅರ್ಜಿ ಹಾಕಿದ ನಂತರ ಬೇಗನೆ ವಿತರಣೆಯಾಗುತ್ತಿಲ್ಲ. ಜತೆಗೆ ವಿವಿಧ ಸರಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಈ ದಿಸೆಯಲ್ಲಿ ಸರಕಾರ ಸ್ಪಂದಿಸುವಂತೆ ಕಾರ್ಮಿಕರು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಕಾರ್ಮಿಕರು,
ಕಾರ್ಮಿಕ ಕಾರ್ಡುಗಳು ಇದ್ದವರಿಗೂ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಶಿಕ್ಷಣ ಸೌಲಭ್ಯ, ಮದುವೆಗೆ ಧನಸಹಾಯ, ಅಪಘಾತಕ್ಕೆ ಪರಿಹಾರ ಸೇರಿದಂತೆ ಯಾವುದೇ ಸಹಾಯ ಸಿಗುತ್ತಿಲ್ಲ. ಆದ್ದರಿಂದ ಈ ಬೇಡಿಕೆಗಳನ್ನು ವಾರದಲ್ಲಿ ಪೂರೈಸಬೇಕು. ಇಲ್ಲವಾದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು
ಪರಿಸರ ಪ್ರೇಮಿ ಶಿವಾಜಿ ಕಾಗಣೆಕರ, ಸಾಮಾಜಿಕ ಹೋರಾಟಗಾರ ಸುಜಿತ್ ಮುಳಗುಂದ,
ಕಡೋಲಿ ಗ್ರಾಮದ ಸೋಮನಾಥ ಪಾಟೀಲ, ಗೋರಕ್ ನಾಗೋಜಿ ಡೌರಿ, ಹೀರಾಮನಿ ಹೊನಗೇಕರ, ಈರಪ್ಪ ಪಾಟೀಲ, ಕಲ್ಲಪ್ಪ ಪಾಟೀಲ ಅವರು ಕಾರ್ಮಿಕ ಸಚಿವರಿಗೆ ಎಚ್ಚರಿಕೆ ರವಾನಿಸಿದ್ದಾರೆ.