ಬೆಳಗಾವಿ : ಚವ್ಹಾಟಗಲ್ಲಿಯ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ತಿನ ಜಿಲ್ಲಾಧ್ಯಕ್ಷ ಅನಿಲ ಬೆನಕೆ ಅವರ ಕಾರ್ಯಾಲಯದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ತಿನ ಬೆಳಗಾವಿ ನಗರ ದಕ್ಷಿಣ ಭಾಗದ ಅಧ್ಯಕ್ಷರನ್ನಾಗಿ ಸತೀಶ ಬಾಚಿಕರ ಅವರನ್ನು ನೇಮಕ ಮಾಡಲಾಗಿದ್ದು, ಬೆಳಗಾವಿ ಜಿಲ್ಲಾ ಕೆ.ಕೆ.ಎಮ್.ಪಿಯ ಅಧ್ಯಕ್ಷ ಹಾಗೂ ಎಲ್ಲ ಕಾರ್ಯಕರ್ತರ ಸಮ್ಮುಖದಲ್ಲಿ ಪದಗ್ರಹಣ ಸಮಾರಂಭ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಅನಿಲ ಬೆನಕೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ ಸಂಘಟನೆಯು ರಾಜ್ಯದ ಎಲ್ಲ ಮರಾಠಾ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದ್ದರಿಂದ ಇಂದು ಸಮಾಜದ ಪ್ರತಿಷ್ಠಿತ ಸಾಮಾಜಿಕ ಕಾರ್ಯಕರ್ತ ಸತೀಶ ಬಾಚಿಕರ ಅವರನ್ನು ಬೆಳಗಾವಿ ನಗರ ದಕ್ಷಿಣ ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು ಅವರು ಸಮಾಜವನ್ನು ಸಂಘಟಿತಗೊಳಿಸಿ ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ ಎಂದು ನಂಬಿದ್ದೇನೆ ಹಾಗೂ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ಅನಿಲ ಬೆನಕೆ, ಸಂಜೀವ ಭೋಸಲೆ, ದಿಲೀಪ ಪವಾರ, ಸತೀಶ ಬಾಚಿಕರ, ರಾಜು ಹೋಳಕರ, ರೋಹನ ಕದಮ, ಡಿ.ಬಿ.ಪಾಟೀಲ, ಎಸ್.ಜಿ.ಪವಾರ ದೇಸಾಯಿ ಅಥಣಿ, ಸುನೀಲ ಡೋಂಗರೆ ಕಾಗವಾಡ, ಪ್ರಮೋದ ಗುಂಜಿಕರ, ಮನೋಜ ಚವ್ಹಾನಪಾಟೀಲ, ಸುರಜ ಪಟೆಲ, ರಾಹುಲ ಪವಾರ ಖಾನಾಪುರ, ಕೃಷ್ಣಾ ಹಸಬೆ, ಶಿವಾಜಿ ಜಾಧವ, ಪ್ರಶಾಂತ ಗುರವ, ಆರ್.ಕೆ.ಪಾಟೀಲ ಉಪಸ್ಥಿತರಿದ್ದರು.