ಲಂಡನ್ :
ಅಧಿಕಾರ ವಹಿಸಿಕೊಂಡು ಕೇವಲ 45 ದಿನಗಳಲ್ಲಿ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್
ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದರಿಂದ ಇನ್ಪೋಸಿಸಿ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ, ಭಾರತೀಯ ಮೂಲದ ಮಾಜಿ ವಿತ್ತ ಸಚಿವ ರಿಷಿ ಸುನಾಕ್ ಅವರು ಮುಂದಿನ ಉತ್ತರಾಧಿಕಾರಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಲಿಜ್ ಟ್ರಸ್ ಅವರ ಆಡಳಿತದ ಬಗ್ಗೆ ಅವರು ಪ್ರತಿನಿಧಿಸುವ ಕನ್ಸರ್ವೇಟಿವ್ ಪಕ್ಷದಲ್ಲಿ ಅಸಮಾಧಾನದ ಅಲೆ ಎದ್ದಿದ್ದವು. ಹೀಗಾಗಿ ಅವರು ಪಕ್ಷದ ಆಂತರಿಕ ಕಚ್ಚಾಟದಿಂದ ರಾಜೀನಾಮೆ ನೀಡಿದ್ದು ರಿಷಿ ಸುನಾಕ್ ಅವರ ಪ್ರಧಾನಿಯಾಗುವ ಹಾದಿ ಸುಗಮವಾಗುವ ಸಾಧ್ಯತೆಯಿದೆ.
ಬ್ರಿಟನ್ ನಲ್ಲಿ ತೀವ್ರ ಆರ್ಥಿಕ ಕುಸಿತ ನಿಭಾಯಿಸಲು ಸಾಧ್ಯವಾಗದಿರುವುದಕ್ಕೆ ಕನ್ಸರ್ವೆಟಿವ್ ಪಕ್ಷದ ಟ್ರಸ್
ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. 6ವಾರಗಳ ಹಿಂದಷ್ಟೆ ರಿಷಿ ಸುನಾಕ್ ಅವರನ್ನು ಸೋಲಿಸಿ ಪ್ರಧಾನಿಯಾಗಿದ್ದರು.
47 ವರ್ಷದ ಟ್ರಸ್ ಅವರು
42 ವರ್ಷದ ಭಾರತೀಯ ಮೂಲದ ರಿಷಿ ಸುನಾಕ್ ಅವರನ್ನು ಸುಮಾರು 21 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
ಚುನಾವಣೆಯಲ್ಲಿ ನಾನು ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗದೆ ಇರುವುದರಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಇದೀಗ ಟ್ರಸ್ ತಮ್ಮ ರಾಜೀನಾಮೆಗೆ ಪ್ರತಿಕ್ರಿಯೆ ನೀಡಿದ್ದಾರೆ.