ಬೆಳಗಾವಿ :
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ಅಮೃತ ಮಹೋತ್ಸವ ನಿಮಿತ್ತ ಬೆಳಗಾವಿ, ಚಿಕ್ಕೋಡಿ, ಅಂಕಲಿಯ ಸುತ್ತಮುತ್ತಲಿನ ಇಪ್ಪತ್ತೆಂಟಕ್ಕೂ ಹೆಚ್ಚು ಗ್ರಾಮಗಳ ಪಂಢರಪುರ ಯಾತ್ರೆಗೆ ಹೋಗುವ ದಿಂಡಿಯ ಸುಮಾರು 500 ಭಕ್ತಾದಿಗಳು ಶನಿವಾರದಂದು ಜರುಗಿದ ಡಾ.ಕೋರೆಯವರ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾದಯಾತ್ರೆಯ ಮೂಲಕವೇ ಬೆಳಗಾವಿಗೆ ಆಗಮಿಸಿ ಡಾ.ಕೋರೆಯವರಿಗೆ ಶುಭ ಕೋರಿ ಅಭಿನಂದಿಸಿದರು.
ಈ ದಿಂಡಿಯ ಯಾತ್ರಾರ್ಥಿಗಳು ಅಂಕಲಿಯ ಸ್ವಾತಂತ್ರ್ಯ ಸೇನಾನಿ ಬಸವಪ್ರಭು ಕೋರೆಯವರ ಕಾಲದಿಂದಲೂ ಅಂಕಲಿ ಗ್ರಾಮಕ್ಕೆ ಆಗಮಿಸಿ ಸ್ವಲ್ಪದಿನಗಳವರೆಗೆ ಅಲ್ಲಿಯೇ ಭಕ್ತಿಯ ಆರಾಧಾನೆ ಮಾಡಿ ಪಂಢರಪುರಕ್ಕೆ ಭಕ್ತಿಸೇವೆಗೆ ತೆರಳುತ್ತಾ ಬಂದಿದ್ದಾರೆ. ಅಂದು ಕೂಡ ಬಸವಪ್ರಭು ಕೋರೆ ಅವರು ಭಕ್ತರಿಗೆ ಎಲ್ಲರೀತಿಯ ಅನುಕೂಲಗಳನ್ನು ಕಲ್ಪಿಸಿಕೊಡುತ್ತಿದ್ದರು. ಇಂದು ಆ ಕಾರ್ಯವನ್ನು ಡಾ.ಪ್ರಭಾಕರ ಕೋರೆಯವರು ದಿಂಡಿಯಾತ್ರಿಕರ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಅಂತೆಯೆ ದಿಂಡಿಯ ಭಕ್ತಾದಿಗಳು ಕೂಡ ಡಾ.ಕೋರೆಯವರ ಅವರ ಅಮೃತ ಮಹೋತ್ಸವದಲ್ಲಿ ಪಾದಯಾತ್ರೆಯ ಮೂಲಕವೇ ಬಂದು ಸಮಾರಂಭದಲ್ಲಿ ಪಾಲ್ಗೊಂಡು ಭಜನೆ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ದಿಂಡಿಯ ಪ್ರಮುಖರಾದ ಯಳ್ಳೂರಿನ ಧಾಮಣೆ ಕೆರವಾಡ್ಕರ್, ಅಜಿತ ಪಾಟೀಲ, ಅಂಬೇವಾಡಿಯ ಕುಲದೀಪ ತರಳೆ, ಕುದ್ರಿಮನಿಯಿಂದ ಮಲ್ಲಪ್ಪಾ ಪಾಟೀಲ, ಅರ್ಜುನ ಜಾಂಬೋಟ್ಕರ್, ನಿಂಗಪ್ಪಾ ಬಾಬುರಾವ್ ಪಾಟೀಲ, ಮುತಗಿಯ ಶಾಮರಾವ್ ಪಾಟೀಲ, ಮಾರ್ಗದರ್ಶಕರಾದ ಬೆಳಗಾವಿಯ ಪ್ರೊ.ಎ.ಎ.ಘೋರ್ಪಡೆ ಉಪಸ್ಥಿತರಿದ್ದರು.