“ಉಂಡ ಮನೆಯ ಮಹಿಳೆ ಮೇಲೆ ಕಣ್ಣ ಹಾಕಿದ” ಹಿರೇಬಾಗೇವಾಡಿ ಪೊಲೀಸಪ್ಪ..!
ಪೊಲಿ ಕಾನ್ಸ್ಟೇಬಲ್ ವರ್ತನೆಗೆ ಬೆಸತ್ತು ಕಮೀಷನರ್ ಗೆ ದೂರು ನೀಡಿದ ಪತಿರಾಯ..!
ಬ್ಯಾಚುಲರ್ ಬಾಯ್ ಆಂಟಿ ಹಿಂದೆ ಬಿದ್ದಿದ್ಯಾಕೆ..?
ಬೆಳಗಾವಿ : ಮನೆಗೆ ಬಂದವರಿಗೆ ಊಟ ಹಾಕಿದರೆ ಅವರು ಅದರ ಋಣಕ್ಕಾಗಿ ಕನಿಷ್ಟಪಕ್ಷ ಧನ್ಯೋಸ್ಮಿ ಎಂದು ಹೇಳುವ ಸಂಸ್ಕ್ರತಿ ನಮ್ಮ ದೇಶದಲ್ಲಿದೆ. ಆದರೆ ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಠಾಣೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲಿ ಪೊಲೀಸ ಪೇದೆಯೋಬ್ಬ ಊಟ ಮಾಡಿದಲ್ಲಿಯೇ ಮಂಚದ ವರೆಗೆ ಹೋಗಲು ಮುಂದಾಗಿದ್ದಾನೆ. ಈತನ ಈ ದುವರ್ತನೆ ಕಂಡು ಅನ್ನ ಕೊಟ್ಟ ಮಾಲಿಕ ಇತನ ವಿರುದ್ಧ ಪೊಲೀಸ್ ಕಮೀಷನರ್ ಅವರಿಗೆ ದೂರು ಕೊಟ್ಟು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.
ಏನಿದು ..?
ವಿವಾಹಿತ ಮಹಿಳೆಯೊಂದಿಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಅವಿವಾಹಿತ ಪೇದೆಯೋರ್ವ ( ಕಾನ್ಸಟೇಬಲ್ ) ಅಸಭ್ಯವಾಗಿ ನಡೆದುಕೊಂಡಿದ್ದು, ಆತನ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಮಹಿಳೆ ಪತಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಈ ದೂರಿನನ್ವಯ ಪೊಲೀಸ್ ಆಯುಕ್ತರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಳಗಾವಿ ಗ್ರಾಮೀಣ ಎಸಿಪಿಗೆ ಸೂಚನೆ ನೀಡಿದ್ದಾರೆ.
ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಅವಿವಾಹಿತ ಪೇದೆ ಮಡ್ಡೇಪ್ಪ ಮಂಟೂರ ಎಂಬಾತ ಈ ಹಿಂದೆ ಹಲಗಾ ಗ್ರಾಮದ ಬೀಟ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ಈ ವೇಳೆ ಅಲ್ಲಿಯೇ ಇದ್ದ ದಾಬಾ ಮಾಲೀಕನೊಂದಿಗೆ ಪರಿಚಯವಾಗಿದ್ದಾನೆ. ಬಿಟ್ ಪೊಲೀಸ್ ಆಗಿದ್ದರಿಂದ ಅಲ್ಲಿಯೇ ಊಟ ಮಾಡಿ ವಿಶ್ರಾಂತಿ ಪಡೆಯಲು ಆರಂಭಿಸಿದ್ದಾನೆ. ಬಳಿಕ ಈ ಪೊಲಿ ಪೊಲೀಸಪ್ಪ ದಾಬಾ ಮಾಲೀಕನ ಪತ್ನಿಯೊಂದಿಗೆ ಸ್ನೇಹ ಬೆಳೆಸಿ ಅನುಚಿತವಾಗಿ ವರ್ತನೆ ನಡೆಸಿದ್ದಾನೆ. ಈ ವಿಚಾರವಾಗಿ ನೊಂದ ವ್ಯಕ್ತಿ ಠಾಣೆಗೆ ತೆರಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಈ ವೇಳೆ ಅಧಿಕಾರಿಗಳು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡು ಬುದ್ದಿಮಾತು ಹೇಳಿದ್ದಾರೆ. ಆದರೂ ತನ್ನ ಹಳೆಯ ಚಾಳಿ ಬೀಡದ ಪೇದೆ ತನ್ನ ದುರ್ಬುದ್ದಿಯನ್ನು ಮುಂದುವರಿಸಿದ್ದರಿಂದ ಮಹಿಳೆಯ ಪತಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾನೆ.
ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಾಗಿದ್ದ ಪೊಲೀಸ ತನ್ನ ಚಟಕ್ಕಾಗಿ ರಾಕ್ಷಸನಂತೆ ವರ್ತಿಸುವ ಈ ಪ್ರವೃತ್ತಿ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದಿರುವುದಂತೂ ನಿಜ. ಇಂತಹ ಪೇದೆ ವಿರುದ್ಧ ಖಡಕ ಕಮೀಷನರ್ ಯಾವ ಕ್ರಮ ಕೈಗೊಳ್ಳುವರು ಎಂದು ಕಾದೂ ನೋಡಬೇಕು.
ಹಿರೇಬಾಗೇವಾಡಿ ಪೇದೆಯೋರ್ವ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರು ಬಂದಿದೆ. ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗ್ರಾಮೀಣ ವಿಭಾಗದ ಎಸಿಪಿ ಅವರಿಗೆ ಸೂಚಿಸಲಾಗಿದೆ
ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಹೇಳಿದ್ದಾರೆ.