ಬೆಳಗಾವಿ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಗುತ್ತಿಗೆ ಆಧಾರದ ಮೇಲೆ ಕಾರ್ಯಾಲಯ ಸಹಾಯಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಂಪ್ಯೂಟರ್ ಎಮ್ ಎಸ್ ಆಫೀಸ್, ಇಂಟರ್ನೆಟ್ ಜ್ಞಾನ ಹೊಂದಿರಬೇಕು. ಮತ್ತು ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಕಡ್ಡಾಯ. ಅಕೌಂಟಿಂಗ್ ಜ್ಞಾನ ಹೊಂದಿರಬೇಕು. ಉತ್ತಮ ಸಂವಹನ ಕಲೆ ಹೊಂದಿರಬೇಕು ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಓದಲು ಮತ್ತು ಬರೆಯಲು ಬರಬೇಕು. ಹಿಂದಿ ಭಾಷೆ ಹೆಚ್ಚಿನ ಜ್ಞಾನ ಹೊಂದಿರುವುದು. ಮತ್ತು ಆರ್ಸೆಟಿ/ರುಡಸೆಟಿಗಳಂಥ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವಿದ್ದಲ್ಲಿ ವಿಶೇಷ ಮನ್ನಣೆ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಜೊತೆಗೆ ಒಂದು ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ಅರ್ಜಿಯನ್ನು ಸ್ವ ಅಕ್ಷರದಲ್ಲಿ ಬರೆದಿರಬೇಕು ಅಥವಾ ಟೈಪ್ ಮಾಡಿರಬೇಕು. ಅರ್ಜಿಯಲ್ಲಿ ಅನುಭವ ಮತ್ತು ಈಗ ಮಾಡುತ್ತಿರುವ ಉದ್ಯೋಗದ ವಿವರದೊಂದಿಗೆ ಅರ್ಜಿಯನ್ನು ತಮ್ಮ ಸ್ವ-ವಿಳಾಸ ಅಂಚೆ ಚೀಟಿ ಲಗತ್ತಿಸಿದ ಲಕೋಟೆಯೊಂದಿಗೆ ಫೆ.28 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಪ್ಲಾಟ ನಂ ಸಿ ಎ-೦3 ಆಪ್ ಕಣಬರ್ಗಿ ಇಂಡಸ್ಟ್ರೀಯಲ್ ಏರಿಯಾ ಆಟೋ ನಗರ ಇಲ್ಲಿಗೆ ಅಥವಾ ದೂರವಾಣಿ ೦೮೩೧-೨೪೪೦೬೪೪ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.