ಬೆಕ್ಕಿನಕೇರಿಯಲ್ಲಿ ಮಹಿಳೆ ಆತ್ಮಹತ್ಯೆ ..!
ಸಾವಿನ ಸುತ್ತ ಅನುಮಾನದ ಹುತ್ತ..?
ಬೆಳಗಾವಿ : ಮಹಿಳೆಯೊರ್ವಳು ಊರಿನಲ್ಲಿರುವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು (ಸೋಮವಾರ)ಬೆಳಗಿನ ಜಾವ ತಾಲೂಕಿನ ಬೆಕ್ಕಿನಕೇರಿ ಗ್ರಾಮದಲ್ಲಿ ಬೆಳಕಿಗೆ ಬoದಿದೆ .
55 ವರ್ಷದ ಸುನೀತಾ@ಸಿಂಧೂ ಪತಿ ರವಳು ಭಡಾಂಗೆ ಮೃತ ದುರ್ದೈವಿ.
ಇವರ ಇಬ್ಬರು ಪುತ್ರರು ಭಾರತೀಯ ಸೇನೆಯಲ್ಲ ಸೇವೆ ಸಲ್ಲಿಸುತ್ತಿದ್ದು, ಪತಿ ಸೇರಿ ಅಪಾರ ಬಂಧು ಬಳಗ ಇದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸಾವಿನ ಬಗ್ಗೆ ಗ್ರಾಮದಲ್ಲಿ ಹಲವು ಊಹಾಪೂಹ ಎದ್ದಿದ್ದು, ಪೊಲೀಸರೇ ಸ್ಪಷ್ಟ ಪಡಿಸಬೇಕಿದೆ.
ಘಟನೆ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.