ಬೆಳಗಾವಿ :
ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 22 ರಂದು ನಾಲ್ಕನೇಯ ಶನಿವಾರ ಅಕ್ಟೋಬರ್ 23 ರಂದು ರವಿವಾರ ಅಕ್ಟೋಬರ್24 ರಂದು ಸೋಮವಾರ ನರಕಚತುರ್ದಶಿ ಅಕ್ಟೋಬರ್ 25 ಮಂಗಳವಾರ ದೀಪಾವಳಿ ಅಮವಾಸ್ಯೆ ಹಬ್ಬದ ಹಾಗೂ ಅಕ್ಟೋಬರ್ 26 ರಂದು ಬುಧವಾರ ಬಲಿಪಾಡ್ಯಮಿ ಹೀಗೆ ಸರಣಿ ರಜೆ ಇರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಗೋಕಾಕ, ಹುಕ್ಕೇರಿ,ರಾಯಬಾಗ ಮತ್ತು ಅಥಣಿ ಘಟಕಗಳಿಂದ ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಮಾಡಲಾಗುವುದು.
ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಮತ್ತು ಗೋಕಾಕ ರಾಯಬಾಗ ಘಟಕಗಳಿಂದ ಕೊಲ್ಹಾಪುರ, ಪುಣೆ, ಮುಂಬಯಿ ಹಾಗೂ ಇತರೇ ಅಂತರರಾಜ್ಯ ಮಾರ್ಗಗಳಿಗೆ ಅಕ್ಟೋಬರ್ 20 ರಿಂದ ನವೆಂಬರ್ 3 ರವರೆಗೆ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಗೋಕಾಕ, ಹುಕ್ಕೇರಿ, ರಾಯಬಾಗ ಮತ್ತು ಅಥಣಿ ಘಟಕಗಳಿಂದ ಅಕ್ಟೋಬರ್ 21 ರಿಂದ ಅಕ್ಟೋಬರ್ 23 ರವರೆಗೆ ಬೆಂಗಳೂರಿನಿಂದ ವಿಶೇಷ ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಮಾಡಲಾಗುವುದು.
ದೀಪಾವಳಿ ಹಬ್ಬ ಆಚರಿಸಿ ಮರಳುವ ಪ್ರಯಾಣಿಕರಿಗಾಗಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಗೋಕಾಕ, ಹುಕ್ಕೇರಿ, ರಾಯಬಾಗ ಮತ್ತು ಅಥಣಿ ಘಟಕಗಳಿಂದ ಅಕ್ಟೋಬರ್ 26 ರಿಂದ ನವೆಂಬರ್ 1 ರವರೆಗೆ ಬೆಂಗಳೂರಿಗೆ ವಿಶೇಷ ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಮಾಡಲಾಗುವುದು.
ಅಕ್ಟೋಬರ್ 26 ಮತ್ತು 27 ರಂದು ವಿಭಾಗದ ನಿಪ್ಪಾಣಿ ಘಟಕದಿಂದ ನಿಪ್ಪಾಣಿ-ಇಚಲಕರಂಜಿ, ನಿಪ್ಪಾಣಿ-ಕೋಲ್ಹಾಪುರ ಚಿಕ್ಕೋಡಿ ಘಟಕದಿಂದ ಚಿಕ್ಕೋಡಿ-ಇಚಲಕರಂಜಿ, ಚಿಕ್ಕೋಡಿ-ಮಿರಜ ಸಂಕೇಶ್ವರ ಘಟಕದಿಂದ ಸಂಕೇಶ್ವರ-ಗಡಹಿAಗ್ಲಜ. ಸಂಕೇಶ್ವರ-ಕೋಲ್ಹಾಪೂರ ಮತ್ತು ಅಥಣಿ ಘಟಕದಿಂದ ಅಥಣಿ-ಮಿರಜ ಮಾರ್ಗಗಳಲ್ಲಿ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಚಿಕ್ಕೋಡಿ ವಿಭಾಗದ ವಾಕರಸಾಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.