ಮೈ ಮರೆಯದಿರು
ಹತ್ತಾದರೂ ಹೊತ್ತಾದರೂ
ಓದು ನೀ ಮಗುವೇ
ಹೆತ್ತವರಿಗೆ ಹೊತ್ತವರಿಗೆ
ಖುಷಿಯೂ ನೀ ತರುವೇ
ಕಂಡ ಕನಸುಗಳಿಗೆ ಪರಿಶ್ರಮದಿ
ನೀರೆರೆದು ಬೆಳೆಸಿರುವೆ
ಹೂವು ಬಿಡುವ ಸಮಯವಿನ್ನು
ಮೈ ಮರೆಯದಿರು ನೀ ಇನ್ನೂ
ಮಾಡಿದ ಅಡುಗೆ ಬಡಿಸುವ ಮುನ್ನ
ಉಪ್ಪು ಖಾರ ಬೆಲ್ಲದ ರುಚಿಯನ್ನು
ಸವಿದು ನೋಡೋ ಸಮಯವಿನ್ನು
ಈಗ ಮೈ ಮರೆಯದಿರು ನೀ ಇನ್ನೂ
ಗುರುವಿನ ಪಾಠ ಕಲಿತು
ಪರಿಪಕ್ವತೆಯೆಡೆಗೆ ಸಾಗಿರುವೆ
ಗುರುವಿನ ಪರೀಕ್ಷೆಯ ಪ್ರಶ್ನೆಗೆ
ಪಕ್ಟತೆ ತುಂಬಿದ ಉತ್ತರ ನೀನಾಗು
ಪರೀಕ್ಷೆ ಭಯ ಹೋಗಿ
ನಿಮ್ಮ ನೀರೀಕ್ಷೆಯಂತೆ ಹಬ್ಬವಾಗಿ
ಫಲಿತಾಂಶ ಫಲವಾಗಿ ಸಿಹಿಯಾಗಿ
ಖುಷಿಯಾಗಲೆಂದು ಹಾರೈಸುವೆ
ಧೈರ್ಯಂ ಸರ್ವತ್ರ ಸಾಧನಂ
ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ
💐💐👍👍💐💐
ಎಸ್.ಕೆ.ದೇಸಾಯಿ