15 ಲಕ್ಷ ನಾಶ : ಹಾರೂಗೊಪ್ಪದಲ್ಲಿ ಮಾದಕ ವಸ್ತು ನಿಷ್ಕ್ರಿಯಗೊಳಿಸಿದ ಪೊಲೀಸ್ ಇಲಾಖೆ
ಬೆಳಗಾವಿ :
ಎನ್ಡಿಪಿಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಬೆಳಗಾವಿ ಜಿಲ್ಲಾ
ಡ್ರಗ್ಸ್ ಡಿಸ್ಪೋಸಲ್ ಕಮೀಟಿ ವತಿಯಿಂದ ನಿಷ್ಕ್ರೀಯಗೊಳಿಸಲಾಗಿದೆ.
ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಾಣಿಕೆ/ ಮಾರಾಟ/ ಬೆಳೆಯುತ್ತಿದ್ದವರ ಮೇಲೆ ದಾಳಿ ಮಾಡಿ ಎನ್ಡಿಪಿಎಸ್ ಕಾಯ್ದೆಯಡಿಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿದ ಒಟ್ಟು 52 ಪ್ರಕರಣಗಳಲ್ಲಿ ಅಂದಾಜು ರೂ. 15,10,821/- ಕಿಮ್ಮತ್ತಿನ 291.336 ಕೆ.ಜಿ.ಯಷ್ಟು ಮಾದಕ ವಸ್ತುಗಳನ್ನು ನ್ಯಾಯಾಲಯದ ಹಾಗೂ ಮಾಲಿನ್ಯ ನಿಯಂತ್ರಣಾಧಿಕಾರಿಗಳ ಅನುಮತಿಯೊಂದಿಗೆ ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿ ಶುಕ್ರವಾರ ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣಾ ವ್ಯಾಪಿಯ ಹಾರೂಗೊಪ್ಪ ಗ್ರಾಮ ಹದ್ದಿಯಲ್ಲಿ ದಿ ಬೆಲಗಾಂ ಗ್ರೀನ್ ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಪ್ರಾ.ಲಿ. ಹಾರೂಗೊಪ್ಪ ನೇದ್ದರಲ್ಲಿ ಮಾದಕ ವಸ್ತುಗಳನ್ನು ನಿಯಮಾನುಸಾರ ನಿಷ್ಕ್ರೀಯಗೊಳಿಸಲಾಗಿದೆ
ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟಣೆ ತಿಳಿಸಿದೆ.