ಬೆಳಗಾವಿ : ಇಲ್ಲಿಯ ಜಿ.ಎ. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಕಾಲೇಜು ಒಕ್ಕೂಟ ಹಾಗೂ ಎನ್ ಎಸ್ ಎಸ್ ಘಟಕದ ಚಟುವಟಿಕೆಗಳ ಮುಕ್ತಾಯ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಜರುಗಿತು.
ಬೈಲಹೊಂಗಲದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕ ಬಸವರಾಜ ಜಿ. ಪುರಾಣಿಕ ಮಠ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್. ಎಸ್. ಪಾಟೀಲ ಮಾತನಾಡಿ, ಇಂದಿನ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನವನ್ನು ಸಂಗ್ರಹಿಸಿಕೊಳ್ಳಬೇಕು ಎಂದರು. ರೂಪಾ ಜುಟ್ಟಪ್ಪನವರ ಪ್ರಾರ್ಥಿಸಿದರು. ರಂಜಿತಾ ಮಾಸಣ್ಣವರ ಸ್ವಾಗತಿಸಿದರು. ಟಿ.ಪಿ. ಬಾನಕರೆ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಎಸ್ .ಎನ್. ಮಡಿವಾಳ ಪರಿಚಯಿಸಿದರು. ಒಕ್ಕೂಟದ ವಾರ್ಷಿಕ ವರದಿಯನ್ನು ಇತಿಹಾಸ ಉಪನ್ಯಾಸಕ ವಿನಾಯಕ ನೀರಲಕಟ್ಟಿ ಮಂಡಿಸಿದರು. ಮಂಜುಳಾ ಶೆಟ್ಟನ್ನವರ ವಂದಿಸಿದರು. ಶಿಲ್ಪಾ ದೇವಲಾಪುರ ಹಾಗೂ ಶೃತಿ ನೀರಲಗಿ ಹಿರೇಮಠ ನಿರೂಪಿಸಿದರು.