ಗೋಕಾಕ :
ಗೋಕಾಕ ನಗರದ ನಿವಾಸಿ ನಾಗಮ್ಮ ಮೇಲ್ಮಟ್ಟಿ (80) ರವಿವಾರ ವಯೋಸಹಜ ಕಾಯಿಲೆಯಿಂದ ನಿಧನರಾದರು.
ಮೃತರು ಮೂವರು ಪುತ್ರರು, ಪುತ್ರಿ ಹಾಗೂ ಅಳಿಯ ಮಲ್ಲಿಕಾರ್ಜುನ ಪಿ. ಗಾಣಗಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗೋಕಾಕದ ಲಿಂಗಾಯತ ಸ್ಮಶಾನದಲ್ಲಿ ಜರುಗಿತು.
ಸಂತಾಪ :
ನಾಗಮ್ಮ ಮೇಲ್ಮಟ್ಟಿ ಅವರು ಗಾಣಿಗ ಸಮಾಜದ ಪ್ರತಿಷ್ಠಿತ ಮಹಿಳೆಯಾಗಿದ್ದರು. ಅವರ ನಿಧನಕ್ಕೆ ಬೆಳಗಾವಿ ಜಿಲ್ಲೆಯ ಸಮಸ್ತ ಗಾಣಿಗ ಸಮಾಜ ಕಂಬನಿ ಮಿಡಿದಿದೆ.