ಜನ ಜೀವಾಳ ಜಾಲ: ಬೆಳಗಾವಿ — ಜನಸಾಹಿತ್ಯ ಪೀಠ ಬೆಳಗಾವಿಯಿಂದ ರಾಜ್ಯ ಮಟ್ಟದಲ್ಲಿ ಉದಯೋನ್ಮುಖ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ವರಚಿತ ಅಪ್ರಕಟಿತ ಕಥಾಸಂಕಲನಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ
ನಾಡಿನ ಪ್ರತಿಷ್ಠಿತ ‘ಜನಜೀವಾಳ’ ದಿನಪತ್ರಿಕೆ ಯ ಸಹಯೋಗದಲ್ಲಿ ಕೊಡಮಾಡುವ ಈ ಪ್ರಶಸ್ತಿ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ
35 ವರ್ಷದ ಒಳಗಿನ ಯುವ ಬರಹಗಾರರು ತಮ್ಮ ಅಪ್ರಕಟಿತ ಕಥಾಸಂಕಲನದ ಮೂರು ಝೆರಾಕ್ಸ್ ಪ್ರತಿಗಳನ್ನು ತಮ್ಮ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಬಸವರಾಜ ಗ ಗಾರ್ಗಿ ಅಧ್ಯಕ್ಷರು ‘ಜನಸಾಹಿತ್ಯ ಪೀಠ’
ಹೊಂಗನಸು #73 ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿ ಶ್ರೀನಗರ ಬೆಳಗಾವಿ 590017 ( ಮೊ 8453500025,8762889099) ಈ ವಿಳಾಸಕ್ಕೆ ಅಂಚೆ/ಕೊರಿಯರ್ ಮೂಲಕ ದಿನಾಂಕ 20/2/2024 ರ ಒಳಗಾಗಿ ಕಳುಹಿಸಬೇಕು ಎಂದು ಗೌರವ ಕಾರ್ಯದರ್ಶಿ ಶಿವರಾಯ ಏಳುಕೋಟಿ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.