ಬೆಳಗಾವಿ: ವಿಶ್ವ ಭಾರತ ಸೇವಾ ಸಮಿತಿಯ ಹಿಂಡಲಗಾ ಹೈಸ್ಕೂಲ್ ವತಿಯಿಂದ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಿಮ್ಮೆಲ್ಲರ ಪ್ರೀತಿ, ಆಶಿರ್ವಾದದಿಂದ ನಾನು ರಾಜ್ಯದ ಮಂತ್ರಿಯಾಗಿದ್ದೇನೆ. ಇಡೀ ರಾಜ್ಯದ ಜನರ ಸೇವೆ ಮಾಡುವ ಅವಕಾಶವನ್ನು ನನಗೆ ಕೊಟ್ಟಿದ್ದೀರಿ. ಕ್ಷೇತ್ರದ ಗೌರವವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡುತ್ತೇನೆ. ರಾಜ್ಯದ ಅಭಿವೃದ್ಧಿಯ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಸಮಯದಲ್ಲಿ ಯುವರಾಜ ಕದಂ, ವಿಶ್ವ ಭಾರತ ಸೇವಾ ಸಮಿತಿಯ ಅಧ್ಯಕ್ಷ ವಿಜಯರಾವ್ ನಂದಿಹಳ್ಳಿ, ಸ್ಕೇಟಿಂಗ್ ಗೋಲ್ಡ್ ಮೆಡಲಿಸ್ಟ್ ಸಾಯಿ ಪಾಟೀಲ, ವಿಠ್ಠಲ ದೇಸಾಯಿ, ಪ್ರವೀಣ ಪಾಟೀಲ, ಅಶೋಕ ಕಾಂಬಳೆ, ರಾಹುಲ್ ಉರನಕರ್, ರೇಣುಕಾ ಬಾತ್ಕಂಡೆ, ಅಲ್ಕಾ ಕಿತ್ತೂರ್, ಪ್ರೇರಣಾ ಮಿರಜಕರ್, ಗಜಾನನ ಕಾಕತ್ಕರ್, ಕೃಷ್ಣ ಪಾವಸೆ, ರವಿ ತೆರಳೆ ಮುಂತಾದವರು ಉಪಸ್ಥಿತರಿದ್ದರು.