ಬೆಳಗಾವಿ :
ರೈತರ ಮತ್ತು ಶ್ರಮಿಕರ ಕಲ್ಯಾಣದ ಸಂಕಲ್ಪ ಹೊತ್ತು ಕಳೆದ 25 ವರ್ಷಗಳ ಹಿಂದೆ ಸ್ಥಾಪಿತವಾದ ನಿರಾಣಿ ಉದ್ಯಮ ಸಮೂಹ ಇಂದು ಬೃಹದಾಕಾರವಾಗಿ ಬೆಳೆದಿದೆ, ಉದ್ಯಮ ಸಮೂಹದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರ ದೂರದರ್ಶಿತ್ವ ಹಾಗೂ ಮಹತ್ವಾಕಾಂಕ್ಷೆಯ ಫಲವಾಗಿ ನಿರಾಣಿ ಸಮೂಹ ಇಥನಾಲ್ ಉತ್ಪಾದನೆಯಲ್ಲಿ ಮೊದಲನೇ ಹಾಗೂ ಸಕ್ಕರೆ ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. 6 ಸಕ್ಕರೆ ಕಾರ್ಖಾನೆಗಳ ಜೊತೆಗೆ ಇಥೆನಾಲ್, ಸಿ.ಎನ್.ಜಿ , ಸಿ.ಒ.ಟು , ಶಿಕ್ಷಣ , ಬ್ಯಾಂಕಿಂಗ್ , ಸಿಮೆಂಟ್ , ಸುಪರ್ ಮಾರ್ಕೆಟ್ , ಫೌಂಡೇಶನ್ ಮೂಲಕ ಸಮಾಜಸೇವೆ ಸೇರಿದಂತೆ ಹಲವಾರು ಬಗೆಯಲ್ಲಿ ಸಮಾಜ ಕಟ್ಟುವ ಕಾರ್ಯದಲ್ಲಿ ನಿರತವಾಗಿದೆ, ನಿರಾಣಿ ಉದ್ಯಮ ಸಮೂಹದ ಮೂಲಕ 75 ಸಾವಿರ ಕುಟುಂಬಗಳಿಗೆ ನೇರವಾಗಿ ಉದ್ಯೋಗ ದೊರಕಿದರೆ , 1.20 ಲಕ್ಷ ರೈತ ಕುಟುಂಬಗಳು ನಿರಾಣಿ ಸಮೂಹದ ಜೊತೆಗಿವೆ.
ರೈತರ ಆರ್ಥಿಕ ವಿಕಾಸಕ್ಕೆ ಮುನ್ನುಡಿ ಬರೆದ ವಿಜಯ ಸೌಹಾರ್ದ ಸಹಕಾರಿ :
ಕಳೆದ 1 ದಶಕದಿಂದ ರೈತರ ನೆಚ್ಚಿನ ಸಹಕಾರಿಯಾಗಿ , ಠೇವಣಿ ಹೂಡಿಕೆದಾರರ ವಿಶ್ವಾಸಾರ್ಹ ಸಹಕಾರಿಯಾಗಿ ರೂಪುಗೊಂಡಿದೆ. ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ , ಆಧುನಿಕ ಸೌಲಭ್ಯಗಳು , ರಾಜ್ಯದಲ್ಲಿಯೇ ಗರಿಷ್ಠ ಪ್ರಮಾಣದ ಲಾಭಾಂಶ ಹಂಚಿಕೆ , ಸುರಕ್ಷತೆಗೆ ಆದ್ಯತೆ ನೀಡಿದ ಫಲವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯದ ಅಗ್ರಗಣ್ಯ ಸಹಕಾರಿಗಳಲ್ಲಿ ಒಂದಾಗಿ ಬೆಳೆದಿದೆ. ವಿಶಾಲ ಸಹಕಾರಿ ಮೂಲಕ ಎಂ.ಆರ್.ಎನ್ . ಸಮೂಹದಿಂದ ಸಹಕಾರಿ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ:
ವಿಜಯ ಸೌಹಾರ್ದ ಸಹಕಾರಿ ಹಾಗೂ ಪ್ರಜ್ವಲ್ ಸೌಹಾರ್ದ ಸಹಕಾರಿ ಸಂಸ್ಥೆಗಳ ಮೂಲಕ ನಿರಾಣಿ ಸಮೂಹ ಸಹಕಾರ ಕ್ಷೇತ್ರದಲ್ಲಿ ಮೂಂಚೂಣಿಯಲ್ಲಿದ್ದು , ಈಗ ರೈತರಿಗೆ ತ್ವರಿತ ಹಾಗೂ ಉತ್ತಮ ಗುಣಮಟ್ಟದ ಹಣಕಾಸು ಸೇವೆಗಳ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಕಳೆದ ಒಂದು ವರ್ಷದ ಹಿಂದೆ ಜಮಖಂಡಿ ನಗರದಲ್ಲಿ ವಿಶಾಲ ಎಂ.ಆರ್.ಎನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸ್ಥಾಪಿಸಿದೆ. ಅತ್ಯುತ್ತಮ ಹಾಗೂ ನುರಿತ ಸಿಬ್ಬಂದಿ, ಕೋರ್ ಬ್ಯಾಂಕಿಂಗ್ ಸೌಲಭ್ಯ , ಹೊಸ ಯುಗದ ಬ್ಯಾಂಕಿಂಗ್ ಸೌಲಭ್ಯಗಳು , ಠೇವಣಿ ಮೇಲೆ ಆಕರ್ಷಕ ಬಡ್ಡಿದರ , ಸುರಕ್ಷೆ ಹೊಂದಿದ ಆರ್ಥಿಕ ವ್ಯವಹಾರಗಳು , ರಾಷ್ಟ್ರೀಕೃತ ಬ್ಯಾಂಕುಗಳನ್ನು ಹೋಲುವ ಹಾಗೆ ಸೌಲಭ್ಯ ಹಾಗೂ ವ್ಯವಸ್ಥೆಯನ್ನು ಹೊಂದಿರುವುದು ಸಂಸ್ಥೆಯ ವಿಶೇಷತೆಗಳ ಕುರಿತು ಸಹಕಾರಿ ಅಧ್ಯಕ್ಷ ಸಂಗಮೇಶ ನಿರಾಣಿ ವಿವರಿಸಿದರು.
ಬೆಳಗಾವಿ ಮಹಾನಗರದಲ್ಲಿ ನೂತನ ಶಾಖೆ : ನಗರದ ಕ್ಲಬ್ ರಸ್ತೆಯಲ್ಲಿರುವ ಕಾಳಿ ಅಂಬ್ರಾಯಿ ಬಿಲ್ಡಿಂಗ್ ಮೊದಲ ಮಹಡಿಯಲ್ಲಿ ವಿಶಾಲ ಸೌಹಾರ್ದ ಶಾಖೆ ಪ್ರಾರಂಭವಾಗಿದೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭವನ್ನು ನಗರದ ಕೆಎಲ್ಇ ಆಸ್ಪತ್ರೆಯ ಎದುರಿಗೆ ಇರುವ ಕೆ.ಪಿ.ಟಿ.ಸಿ.ಎಲ್ . ಸಮುದಾಯ ಭವನದಲ್ಲಿ ಅ. 15 ರಂದು ಮಧ್ಯಾಹ್ನ 1.00 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ನಾಗನೂರು ರುದ್ರಾಕ್ಷಿಮಠದ ಸ್ವಾಮೀಜಿ ಹಾಗೂ ಹುಕ್ಕೇರಿ ಹಿರೇಮಠದ ಸ್ವಾಮೀಜಿ ವಹಿಸಿಕೊಳ್ಳಲಿದ್ದು ಸಿಎಂ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ , ಪ್ರಹ್ಲಾದ ಜೋಶಿ , ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವರಾದ ಶಶಿಕಲಾ ಜೊಲ್ಲೆ , ಮುರುಗೇಶ ನಿರಾಣಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದು ಸಹಕಾರಿ ಅಧ್ಯಕ್ಷ ಸಂಗಮೇಶ ನಿರಾಣಿ ತಿಳಿಸಿದ್ದಾರೆ.