ಬೆಂಗಳೂರು :
ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಅತಿ ಹೆಚ್ಚು ಸ್ಥಾನ ಗಳಿಸಬೇಕು ಎಂಬ ಹವಣಿಕೆಯಲ್ಲಿರುವ ರಾಜ್ಯ ಕಾಂಗ್ರೆಸ್ ಸರಕಾರ ಇದೀಗ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆಗೆ ಹಲವು ತಿಂಗಳು ಇರುವಂತೆ ಸಚಿವರಿಗೆ ಜವಾಬ್ದಾರಿ ಹಂಚಲಾಗಿದೆ. ಎಐಸಿಸಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಸಚಿವರು ಈಗಿನಿಂದಲೇ ಕಾರ್ಯ ಪ್ರವೃತ್ತರಾಗುವಂತೆ ಸೂಚನೆ ನೀಡಲಾಗಿದೆ.
ಈ ಉಸ್ತುವಾರಿಗಳು ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಈಗಿನಿಂದಲೇ ಚುನಾವಣೆ ಪೂರ್ವಸಿದ್ದತೆ ಆರಂಭಿಸಲಿದ್ದಾರೆ.
28 ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿ:
ಚಿಕ್ಕೋಡಿ- ಎಚ್.ಕೆ.ಪಾಟೀಲ್, ಬೆಳಗಾವಿ- ಸತೀಶ ಜಾರಕಿಹೊಳಿ, ಬಾಗಲಕೋಟೆ-ಆರ್.ಬಿ.ತಿಮ್ಮಾಪುರ, ವಿಜಯಪುರ (ಎಸ್ಸಿ)- ಎಂ.ಬಿ.ಪಾಟೀಲ್, ಕಲಬುರಗಿ (ಎಸ್ಸಿ)- ಪ್ರಿಯಾಂಕ್ ಖರ್ಗೆ, ರಾಯಚೂರು (ಎಸ್ಟಿ)- ಎನ್.ಎಸ್.ಬೋಸರಾಜು, ಬೀದರ್- ಈಶ್ವರ್ ಖಂಡ್ರೆ, ಕೊಪ್ಪಳ- ಶಿವರಾಜ ತಂಗಡಗಿ, ಬಳ್ಳಾರಿ (ಎಸ್ಟಿ)- ಬಿ.ನಾಗೇಂದ್ರ, ಹಾವೇರಿ ಶಿವಾನಂದ ಪಾಟೀಲ್, ಧಾರವಾಡ- ಸಂತೋಷ್ ಲಾಡ್, ಉತ್ತರ ಕನ್ನಡ-ಮಾಂಕಾಳ ವೈದ್ಯ, ದಾವಣಗೆರೆ- ಎಸ್. ಎಸ್.ಮಲ್ಲಿಕಾರ್ಜುನ, ಶಿವಮೊಗ್ಗ- ಮಧು ಬಂಗಾರಪ್ಪ, ಉಡುಪಿ, ಚಿಕ್ಕಮಗಳೂರು- ಕೆ.ಜೆ.ಜಾರ್ಜ್, ಹಾಸನ- ಕೆ.ಎನ್.ರಾಜಣ್ಣ, ದಕ್ಷಿಣ ಕನ್ನಡ- ದಿನೇಶ್ ಗುಂಡೂರಾವ್, ಚಿತ್ರದುರ್ಗ (ಎಸ್ಸಿ)- ಡಿ.ಸುಧಾಕರ, ತುಮಕೂರು ಜಿ.ಪರಮೇಶ್ವರ, ಮಂಡ್ಯ- ಚೆಲುವರಾಯಸ್ವಾಮಿ, ಮೈಸೂರು- ಕೆ. ವೆಂಕಟೇಶ್, ಚಾಮರಾಜನಗರ (ಎಸ್ಸಿ)- ಎಚ್.ಸಿ.ಮಹದೇವಪ್ಪ, ಬೆಂ.ಗ್ರಾಮಂತರ- ಬಿ.ಎಸ್.ಸುರೇಶ್, ಬೆಂಗಳೂರು ಉತ್ತರ- ಕೃಷ್ಣ ಭೈರೇಗೌಡ, ಬೆಂ.ಕೇಂದ್ರ- ಜಮೀರ್ ಅಹ್ಮದ್ ಖಾನ್, ಬೆಂಗಳೂರು ದಕ್ಷಿಣ- ರಾಮಲಿಂಗಾ ರೆಡ್ಡಿ, ಚಿಕ್ಕಬಳ್ಳಾಪುರ- ಕೆ.ಎಚ್.ಮುನಿಯಪ್ಪ, (ಎಸ್ಸಿ)- ಎಂ.ಸಿ.ಸುಧಾಕರ್. ಕೋಲಾರ.
ಆದರೆ, ಲಕ್ಷ್ಮಿ ಹೆಬ್ಬಾಳ್ಕರ್, ರಹೀಮ್ ಖಾನ್, ಶರಣಬಸಪ್ಪ ದರ್ಶನಾಪುರ, ಡಾ. ಶರಣ್ ಪ್ರಕಾಶ್ ಪಾಟೀಲ್ ಅವರಿಗೆ ಯಾವುದೇ ಜವಾಬ್ದಾರಿ ವಹಿಸಿಲ್ಲ.
ಈ ಮೂಲಕವಾಗಿ ರಾಜ್ಯದ ಸಚಿವರಿಗೆ ಇದೀಗ ಎಐಸಿಸಿ ಲೋಕಸಭಾ ಕ್ಷೇತ್ರಗಳ ಜವಾಬ್ದಾರಿಯನ್ನು ನೀಡಿದೆ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಿಕೊಂಡು ಬರುವಂತೆ ಸೂಚನೆ ನೀಡಿದೆ.
28 ಕ್ಷೇತ್ರಕ್ಕೂ ತಲಾ ಒಬ್ಬೊಬ್ಬ ಮಂತ್ರಿಯನ್ನು ನೇಮಕ
ಮಾಡಲಾಗಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಯನ್ನು ಕಾಂಗ್ರೆಸ್ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ಸಂಯೋಜಕರನ್ನು (ಉಸ್ತುವಾರಿಗಳನ್ನು) ನೇಮಕ ಮಾಡಿದೆ, ಕರ್ನಾಟಕದಲ್ಲಿ 28 ಲೋಕಸಭೆ ಕ್ಷೇತ್ರಗಳಿದ್ದು, ಕಾಂಗ್ರೆಸ್ ಈಗ ಕೇವಲ 1 ಸ್ಥಾನ ಹೊಂದಿದೆ. ಇದನ್ನು ಕನಿಷ್ಠ 20-25ಕ್ಕಾದರೂ ಹೆಚ್ಚಿಸಿಕೊಳ್ಳಬೇಕು ಎಂಬುದು ಆ ಪಕ್ಷದ ಹೆಬ್ಬಯಕೆ ಆಗಿದೆ. ಹೀಗಾಗಿ ಚುನಾವಣೆಗೆ ಇನ್ನು 4-5 ತಿಂಗಳು ಇದ್ದರೂ ಈಗಿಂದಲೇ ತಯಾರಿ ಆರಂಭಿಸಿ ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಿಸಿದೆ. ಎಲ್ಲರೂ ಸಿದ್ದರಾಮಯ್ಯ ಮಂತ್ರಿಮಂ ಡಲದ ಸಚಿವರಾಗಿದ್ದು, ಅನೇಕರು ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರೇ ಆಗಿದ್ದಾರೆ ಎಂಬುದು ಗಮನಾರ್ಹ. ಎಐಸಿಸಿ ನೀಡಿರುವ ಈ ಮಹತ್ವದ ಹೊಣೆಯನ್ನು ಕಾಂಗ್ರೆಸ್ ಸಚಿವರು ಯಾವ ರೀತಿಯಲ್ಲಿ ನಿಭಾಯಿಸಿ ಪಕ್ಷಕ್ಕೆ ಕೊಡುಗೆ ನೀಡಲಿದ್ದಾರೆ ಎನ್ನುವುದು ಕಾದು ನೋಡಬೇಕು.