ಬೆಳಗಾವಿ :
ಸಾಹಿತ್ಯ ಭೂಷಣ ಬಿ.ಎಸ್. ಗವಿಮಠ ಅವರ ಸ್ನೇಹಿತರು ಮತ್ತು ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರಾ. ಬಿ. ಎಸ್. ಗವಿಮಠರ ಸಮಗ್ರ ಸಾಹಿತ್ಯ ಕುರಿತು ವಿಚಾರ ಸಂಕಿರಣ ಅಕ್ಟೋಬರ್ 16 ರಂದು ಮಧ್ಯಾಹ್ನ 3-30 ಕ್ಕೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸರಜೂ ಕಾಟ್ಕರ್ ಉದ್ಘಾಟಿಸುವರು. ನಾಡಹಬ್ಬ ಸಮಿತಿ ಅಧ್ಯಕ್ಷ ಮತ್ತು ಖ್ಯಾತ ವೈದ್ಯ ಡಾ. ಎಚ್.ಬಿ. ರಾಜಶೇಖರ ಅಧ್ಯಕ್ಷತೆ ವಹಿಸುವರು.
ಖ್ಯಾತ ಜಾನಪದ ವಿದ್ವಾಂಸ ಡಾ.ಬಸವರಾಜ ಜಗಜಂಪಿ ಉಪಸ್ಥಿತರಿರುವರು.
ಗೋಷ್ಠಿ-1 ರಲ್ಲಿ ಕಿತ್ತೂರು ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪ್ರಜ್ಞಾ ಮತ್ತಿಹಳ್ಳಿ ಅವರು ಕೆಎಲ್ ಇ ಇತಿಹಾಸ- ನೂರರ ಸಿರಿ ಬೆಳಕು ವಿಷಯವಾಗಿ ಮಾತನಾಡುವರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಯಶ್ರೀ ಎ. ಎಂ. ಅವರು ಬಿ. ಎಸ್. ಗವಿಮಠರ ಕಾವ್ಯ ಸಾಹಿತ್ಯ ಮತ್ತು ಜಿಲ್ಲಾ ಲೇಖಕಿಯರ ಸಂಘದ ಕಾರ್ಯದರ್ಶಿ ಡಾ. ಭಾರತಿ ಮಠದ ಅವರು ಬಿ.ಎಸ್.ಗವಿಮಠರ ಕಾವ್ಯ ಸಾಹಿತ್ಯ, ವೈಚಾರಿಕ ಸಾಹಿತ್ಯ ಕೃತಿಗಳು ವಿಷಯವಾಗಿ ಮಾತನಾಡುವರು.
ಖ್ಯಾತ ಕಾದಂಬರಿಕಾರ
ಯ. ರು. ಪಾಟೀಲ ಅವರು ಬಿ.ಎಸ್. ಗವಿಮಠರು ಮತ್ತು ಕನ್ನಡ ಸಂಘಟನೆಗಳು ವಿಷಯವಾಗಿ ಈ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸುವರು. ಹಾರೂಗೇರಿ ಶ್ರೀ ಬಿ.ಆರ್.ದರೂರ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ವಿ.ಎಸ್. ಮಾಳಿ ಅಧ್ಯಕ್ಷತೆ ವಹಿಸುವರು.
ಗೋಷ್ಠಿ -2 ರಲ್ಲಿ ಜೀವನ ಚರಿತ್ರೆಗಳು ಕುರಿತು ಸಾಹಿತಿ ಡಾ.ಪಿ.ಜಿ. ಕೆಂಪಣ್ಣವರ ಅವರು ಜೀವನ ಚರಿತ್ರೆಗಳು, ಸಾಹಿತಿ ಡಾ.ಎ.ಬಿ.ಘಾಟಗೆ ಅವರು ಅನುವಾದಿತ ಕೃತಿಗಳು, ರಂಗಚಿಂತಕ ಶಿರೀಷ ಜೋಶಿ ಅವರು ಸಂಪಾದಿತ ಕೃತಿಗಳು,
ಕೆಎಲ್ಇ ಪ್ರಸಾರಾಂಗ ನಿರ್ದೇಶಕ ಡಾ. ಮಹೇಶ ಗುರನಗೌಡರ ಅವರು
ಕೆಎಲ್ಇ ಪ್ರಸಾರಾಂಗಕ್ಕೆ ಗವಿಮಠರ ಕೊಡುಗೆ ಕುರಿತು ಮಾತನಾಡುವರು. ಖ್ಯಾತ ರಂಗ ಚಿಂತಕ ಡಾ.ರಾಮಕೃಷ್ಣ ಮರಾಠೆ ಅಧ್ಯಕ್ಷತೆ ವಹಿಸುವರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಧಕರಿಗೆ ಸತ್ಕಾರ ಏರ್ಪಡಿಸಲಾಗಿದೆ. ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮತ್ತು ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಮತ್ತು ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಲಿ.ಕಾರ್ಯಕಾರಿ ನಿರ್ದೇಶಕ ಎಂ.ಜಿ. ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಜಿನದತ್ತ ದೇಸಾಯಿ, ಡಾ. ಬಸವರಾಜ ಜಗಜಂಪಿ, ಡಾ. ಸರಜೂ ಕಾಟ್ಕರ್, ವಿ.ಎಸ್. ಮಾಳಿ, ಡಾ. ರಾಮಕೃಷ್ಣ ಮರಾಠೆ, ಯ.ರು.ಪಾಟೀಲ, ಡಾ.ಶ್ರೀಕಾಂತ ವಿರಗಿ, ಆರ್.ಬಿ. ಕಟ್ಟಿ, ಬಿ.ಎಸ್. ಮಾಲಗಾರ,ಎಸ್.ಎಂ. ಅರಳಿಮಟ್ಟಿ, ಡಾ.ಎಫ್.ವಿ.ಮಾನ್ವಿ, ಪ್ರೊ. ಎಂ.ಎಸ್. ಇಂಚಲ, ಪ್ರೊ. ಎಲ್.ವಿ. ಪಾಟೀಲ, ಸುಭಾಷ ಏಣಗಿ, ಡಾ.ಡಿ.ಎಸ್. ಚೌಗಲೆ, ಅಶೋಕ ಚಂದರಗಿ, ಡಾ.ಎ.ಬಿ. ಘಾಟಗೆ, ಪ್ರೊ. ಅಶೋಕ ಘೋರ್ಪಡೆ, ಡಾ. ಎಸ್. ಎಸ್. ಅಂಗಡಿ, ಪುಂಡಲೀಕ ಪಾಟೀಲ, ಶಾಂತಾದೇವಿ ಹುಲೆಪ್ಪನವರಮಠ, ನೀಲಗಂಗಾ ಚರಂತಿಮಠ, ಡಾ.ಗುರುಪಾದ ಮರಿಗುದ್ದಿ, ಮೃತ್ಯುಂಜಯ ಹಿರೇಮಠ, ಎ. ಎ.ಸನದಿ, ಡಾ.ಪಿ.ಜಿ. ಕೆಂಪಣ್ಣವರ, ಎಂ.ಬಿ.ಗೌಡ, ಪ್ರಕಾಶ ಗಿರಿಮಲ್ಲನವರ, ರಮೇಶ ಹಿರೇಮಠ ಉಪಸ್ಥಿತರಿರುವರು.
ಬಿ.ಎಸ್. ಗವಿಮಠ ಅವರ ಅಭಿಮಾನಿಗಳು, ಶಿಷ್ಯವರ್ಗದವರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಾ. ಬಿ.ಎಸ್. ಗವಿಮಠ ಮತ್ತು ಸಮಸ್ತ ಪರಿವಾರದವರು ಮನವಿ ಮಾಡಿದ್ದಾರೆ.