ಬೆಳಗಾವಿ:
ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ಹಿಡಕಲ್ ಜಲಾಶಯ ಹಾಗೂ ರಕ್ಕಸಕೊಪ್ಪದಲ್ಲಿ ನೀರಿನ ಸಂಗ್ರಹದ ಪ್ರಮಾಣ ಮಳೆ ಇಲ್ಲದೆ ಕೊರತೆಯಾಗಿ ದಿನನಿತ್ಯದ ನೀರಿನ ಮಟ್ಟ ಇಳಿಕೆಯಾಗುತ್ತಿರುವುದರಿಂದ ಬೇಸಿಗೆ ಕಾಲದಲ್ಲಿ ನೀರನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸಲು ತೊಂದರೆಯಾಗಬಹುದಾಗಿದೆ.
ನೀರು ಅಮೃತವಾದ ಸಂಪನ್ಮೂಲ. ಅಗತ್ಯಕ್ಕೆ ಅನಗುಣವಾಗಿ ನೀರನ್ನು ನ್ಯಾಯೋಚಿತವಾಗಿ ಬಳಕೆ ಮಾಡುವ ಜವಾಬ್ದಾರಿ ಎಲ್ಲ ನಾಗರಿಕರದ್ದಾಗಿದೆ.
ಆದಕಾರಣ ಸಾರ್ವಜನಿಕರು ಈಗಿನಿಂದಲೇ ಮಿತವಾಗಿ ನೀರನ್ನು ಬಳಸಿ, ನೀರನ್ನು ಪೋಲು ಮಾಡದಿರಿ. ಬರುವ ಬೇಸಿಗೆಯನ್ನು ಎದುರಿಸಲು ಮಹಾನಗರ ಪಾಲಿಕಗೆ ಸಹಕರಿಸಿ ಎಂದು ಮಹಾನಗರ ಪಾಲಿಕೆಯ ಪರವಾಗಿ ಕೆಯುಐಡಿಎಫ್ಸಿ ಅಧೀಕ್ಷಕ ಅಭಿಯಂತ ಅಶೋಕ ಬುರಕುಲೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.