ಬೆಳಗಾವಿ : ಇತ್ತೀಚಿಗೆ ನಗರ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗಿದ್ದ ಮನೆಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಅವುಗಳ ಪತ್ತೆಗಾಗಿ ಡಿಸಿಪಿ ಸ್ನೇಹಾ. ಪಿ. ವಿ. (ಅಪರಾಧ ಮತ್ತು ಸಂಚಾರ) ಬೆಳಗಾವಿ ನಗರ ರವರ ಮಾರ್ಗದರ್ಶನದಲ್ಲಿ ಎಸಿಪಿ ಸದಾಶಿವ ಕಟ್ಟಿಮನಿ ರವರ ಉಸ್ತುವಾರಿಯಲ್ಲಿಪಿಐ ಜೆ. ಎಮ್, ಕಾಲಿಮಿರ್ಚಿ, ಇವರ ನೇತೃತ್ವದ ತಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿ ಮಾಹಿತಿ ಕಲೆ ಹಾಕಿದಾಗ ಓರ್ವ ಖದೀಮ ಕಳ್ಳ ಬಲೆಗೆ ಬಿದ್ದಿದ್ದಾನೆ.
ಪರಶುರಾಮ ಈರಪ್ಪಾ ದಂಡಗಲ (32) ಸಾ: ಲಕ್ಷ್ಮೀ ನಗರ ಜುನೇ ಬೆಳಗಾವಿ ಶಹಾಪೂರ ಎಂಬಾತ ಬಂಧಿತ ಆರೋಪಿ.
ದಿ : 19/12/2023 ರಂದು ಈತನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮನೆ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಆತನಿಂದ ಸುಮಾರು 7,00,000/- ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರೆಸಲಾಗಿದೆ.
ಆರೋಪಿತನನ್ನು ಪತ್ತೆ ಮಾಡಿ, ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಪಿಐ ಮಾಳಮಾರುತಿ ಮತ್ತು ಶ್ರೀಶೈಲ್ ಹುಳಗೇರಿ ಪಿ.ಎಸ್.ಐ. ಮತ್ತು ಸಿಬ್ಬಂದಿ ಜನರಾದ ಎಮ್.ಜಿ.ಕುರೇರ, ಸಿ.ಜೆ.ಚಿನ್ನಪ್ಪಗೋಳ, ಬಿ.ಎಫ್.ಬಸ್ತವಾಡ, ಸಿ.ಐ.ಚಿಗರಿ, ವಿ.ಎಸ್.ಹೊಸಮನಿ, ರವಿ ಬಾರಿಕರ, ಎಮ್.ಆರ್.ಮುಜಾವರ, ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ರಮೇಶ ಅಕ್ಕಿ, ಮಹಾದೇವ ಕಾಸೀದ ಹಾಗೂ ಬೆರಳು ಮುದ್ರೆ ತಜ್ಞರಾದ ತಬ್ರೇಜ್ ಬಾಗವಾನ ಪಿಎಸ್.ಐ. ಮತ್ತು ಬಾಹುಬಲಿ ಎ ಅನಗಾಲೆ ಇವರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.