ಜನ ಜೀವಾಳ ಜಾಲ ಬೆಳಗಾವಿ: ಸಮಾಜದ ಹೃದಯ ಕಲುಕಿದ್ದ ಬೆಳಗಾವಿಯ ಅನಿಷ್ಠ ಘಟನೆಯೊಂದರ ವರದಿ ಮಾಡುವಾಗ ಕನಿಷ್ಠ ತಾಳ್ಮೆ, ಸಂವೇದನೆ ಮಾಧ್ಯಮಗಳು ಪ್ರದರ್ಶಿಸಿಲ್ಲ ಎಂದು ಹೈಕೋರ್ಟ್ ಸ್ವಯಂ ಪ್ರೇರಿತ ದಾಖಲಿಸಿಕೊಂಡ ಪ್ರಕರಣದ ಆದೇಶದಲ್ಲಿನ 3&4 ನೇ ಖಂಡಿಕೆಯಲ್ಲಿ ಮಾಧ್ಯಮಗಳಿಗೆ ಗದರಿಸಿ ಎಚ್ಚರಿಕೆ ನೀಡಿದೆ.
ರಾಜ್ಯದ ಪ್ರಮುಖ ಕನ್ನಡ ಪತ್ರಿಕೆಯೊಂದು ಮಹಿಳಾ ಮಂತ್ರಿಯೋರ್ವರು ದುಖಿಃತರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದ ಸಂದರ್ಭದ ಚಿತ್ರಸಮೇತ ವರದಿ ಪ್ರಕಟಿಸಿದೆ. ಚಿತ್ರ ಮತ್ತು ಇತರ ಅಂಶಗಳನ್ನು ಪ್ರಕಟಿಸಬಾರದು, ಇಲ್ಲವೇ ಬ್ಲರ್ ಮಾಡಬಹುದಿತ್ತು ಎಂಬ ಸಂಜ್ಞೆ ಇಲ್ಲವೇ ಎಂದು ಕೆಲ ಪತ್ರಿಕೆಗಳು ಹಾಗೂ ದೃಶ್ಯಗಳನ್ನು ಉಲ್ಲೇಖಿಸಿ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ದುಖಿಃತರು ಮತ್ತು ಅವರ ಕಡೆಯ ಸಂಬಂಧಿಗಳ ಹೇಳಿಕೆಗಳ ವಿಡಿಯೋಗ್ರಾಫಿ ಮಾಡಿಕೊಳ್ಳಲಾಗಿದೆ. ಮಾಧ್ಯಮಗಳಿಗೆ ಸಂವೇದನೆ ಮತ್ತು ಜವಾಬ್ದಾರಿ ಇದೆಯೇ ಎಂದು ಆದೇಶದಲ್ಲಿ ಹೈಕೋರ್ಟ್ ಪ್ರಶ್ನಿಸಿದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ, ಆಡಿಯೋ, ಫೋಟೋಸ್ ಹೊರಬಿಡುವಂತಿಲ್ಲ.
ಕೆಲ ಮಾಧ್ಯಮಗಳು ಸ್ಪಷ್ಟವಾಗಿ ಈ ಘಟನೆಯ ವಿಡಿಯೋಗ್ರಾಫಿ, ಫೋಟೊಗ್ರಾಫಿ ಮಾಡಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಭಿತ್ತರವಾಗಿದ್ದರೆ ಮತ್ತೆ ಭಿತ್ತರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ತಿಳಿಸಿದೆ. ಸಮಾಜ ತಲೆತಗ್ಗಿಸುವಂತಹ ಮಜುಗುರದ ಸನ್ನಿವೇಶಗಳ ಭಿತ್ತರಿಕೆ ಸಂದರ್ಭ ಎಚ್ಚರಿಕೆ ವಹಿಸುವಂತೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.