ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿ ರಾತ್ರಿಯಿಡೀ ಕಂಬಕ್ಕೆ ಕಟ್ಟಿಹಾಕಿ ದೌರ್ಜನ್ಯ..!
ಮಗಳೊಂದಿಗೆ ಪರಾರಿಯಾದ ಯುವಕನ ತಾಯಿಯನೊಂದಿಗೆ ರಾಕ್ಷಸರಂತೆ ಅಟ್ಟಹಾಸ.!
ಘಟನೆ ನಡೆದು 5 ಘಂಟೆಯ ಬಳಿಕ ಬಂದು ಪೊಸ್ ಕೊಟ್ಟ ಕಾಕತಿ ಠಾಣಾಧಿಕಾರಿ..?
ಕಮೀಷನರ್, ಡಿಸಿಪಿ ಘಟನೆ ಸ್ಥಳಕ್ಕೆ ಭೇಟಿ, ಮಾಜಿ ಅಧ್ಯಕ್ಷ ಸೇರಿ ಎಂಟು ಜನರ ಬಂಧನ..!
ಈ ದುಷ್ಟರು ಯಾವ ರಾಜಕಾರಣಿಯ ಬಲಗೈ ಬಂಟರು ಗೋತ್ತಾ..?
ಬೆಳಗಾವಿ : ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದಕ್ಕೆ ಇಂದು ನಸುಕಿನ ಜಾವ 1 ಘಂಟೆಗೆ ರಾಕ್ಷಸ ರೂಪದಲ್ಲಿರುವ ಕೇಲ ಪಾಪಿ ಮುಖಂಡರು ತಮ್ಮ ಮಗಳು ಪ್ರೀತಿಸಿದವನ ಜೊತೆ ರಾತೋರಾತ್ರಿ ನಿನ್ನ ಮಗನೊಂದಿಗೆ ಪರಾರಿಯಾಗಿದ್ದಾಳೆ ಎಂದು ಪ್ರೀಯಕರನ ಮನೆಗೆ ನುಗ್ಗಿ ಅವನ ಕುಟುಂಬದವರ ಮೇಲೆ ಹಲ್ಲೆ ಮಾಡಿ ಯುವಕನ ತಾಯಿಯೊಂದಿಗೆ ದೌರ್ಜನ್ಯ ನಡೆಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಆಕೆಯನ್ನು ಬೆತ್ತಲಾಗಿಸಿ ನಡು ಬಿದಿಯಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ದುಷ್ಟ ಕ್ರೌರ್ಯ ಮೆರೆದಿದ್ದಾರೆ.
ಆಗಿದ್ದೇನು..?
ಬೆಳಗಾವಿ ತಾಲೂಕಿನ ಹೊಸ ವಟಮೂರಿ ಗ್ರಾಮದಲ್ಲಿ ಅಕ್ಕಪಕ್ಕದ ಗಲ್ಲಿಯಲ್ಲಿರುವ ನಾಯಿಕ ಕುಟುಂಬದ 19 ವರ್ಷದ ಪ್ರಿಯಂಕಾ ಬಸ್ಸಪ್ಪಾ ನಾಯಿಕ ಎಂಬ ಯುವತಿ ಹಾಗೂ 24 ವರ್ಷದ ದುಂಡಪ್ಪಾ ಲಗಮಪ್ಪಾ ಗಡಕರಿ ಕುಟುಂಬದ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಟ್ರಕ್ ಡ್ರಾವರ್. ಅವರ ಪ್ರಿತಿಯನ್ನು ಮನೆಯವರು ಓಪ್ಪಿಲ್ಲ. ಅದಲ್ಲದೆ ಯವಕನಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಯಾಕೆಂದರೆ ಯುವತಿ ತಂದೆ ಕೊಲೆ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾನೆ. ಇದಕ್ಕೆ ಹೆದರಿದ ಯುವಕ ಸುಮ್ಮನಾಗಿದ್ದಾನೆ.
ಆದರೆ ಇಂದು ಯುವತಿಗೆ ಹುಕ್ಕೇರಿ ತಾಲೂಕಿನ ಬೆನಕೋಳಿ ಗ್ರಾಮದ ರಾಜಕೀಯ ಮಖಂಡರೊಬ್ಬರ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಲು ಮನೆಯವರು ನಿರ್ಧರಿಸಿದ್ದರು. ಇದರಿಂದ ಯುವತಿ ಪ್ರೀತಿಸಿದ ಯುವಕನೊಂದಿಗೆ ರಾತೋರಾತ್ರಿ ಓಡಿ ಹೋಗಿದ್ದಾಳೆ.
ನಿಶ್ಚಿತಾರ್ಥದ ದಿನ ಮನೆ ಮಗಳು ಓಡಿ ಹೋಗಿದ್ದಕ್ಕೆ ಮಾನ ಹೋಯಿತೆಂದ ಯುವತಿಯ ಕುಟುಂಬದವರು ಯುವಕನ ಮನೆಗೆ ನುಗ್ಗಿ ಅವರನ್ನು ಮನ ಬಂದಂತೆ ಥಳಿಸಿ, ಯುವಕನ ತಾಯಿಯನ್ನು ನಗ್ನಗೊಳಿಸಿ ಬೆಳಗಿನ ತನಕ ಕಂಬಕ್ಕೆ ಕಟ್ಟಿ ಹಾಕಿ, ಯುವತಿ ಮನೆಯವರೆಲ್ಲ ಸೇರಿ ಥಳಿಸಿ ಮಾನ ಕಳೆದಿದ್ದಾರೆ.
ಈ ಘಟನೆ ಸಾರ್ವಜನಿಕ ಮಂದೆ ನಡೆದಿದ್ದರು ಯಾರು ಸಹಾಯ ಮಾಡಲು ಮುಂದಾಗಿಲ್ಲ. ಯಾಕೆಂದರೆ ಯುವಕನ ಕುಟಂಬವರು ಬಡವರಿದ್ದು, ಯುವತಿಯ ಕಟುಂಬವರು ಶ್ರೀಮಂತರು, ರಾಜಕೀಯ ಮುಖಂಡರು, ಕೊಲೆ ಆರೋಪಿಗಳು ಮತ್ತು ಪ್ರಭಾವಿ ರಾಜಕಾರಣಿಯ ಬಲಗೈ ಬಂಟರು.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿ ಪೊಲೀಸ್ ಕಮೀಷನರ್ ಸಿದ್ದರಾಮಪ್ಪ, ಡಿಸಿಪಿ ರೋಹನ ಜಗದೀಶ, ಸ್ನೇಹಾ ಪಿ ವಿ ಘಟನೆ ಸ್ಥಳಕ್ಕೆ ಧಾವಿಸಿ ಆರೋಪಿಗಳಾದ ಯುವತಿ ತಂದೆ ಬಸಪ್ಪಾ ನಾಯಿಕ, ಮಾಜಿ ಗ್ರಾ ಪಂ ಅಧ್ಯಕ್ಷ ಶಿವಪ್ಪಾ ವನ್ನೂರಿ, ಕೆಂಪಣ್ಣಾ ನಾಯಿಕ, ಹಾಗೂ ಇನ್ನೂರ್ವ ಪುರುಷ ಆರೋಪಿ, ನಾಲ್ವರು ಮಹಿಳೆಯರು ಸೇರಿ ಎಂಟು ಜನರನ್ನು ಬಂಧಿಸಿ ಪ್ರಕರಣ ದಾಖಲಿಸುವಂತೆ ಕಮಿಷನರ್ ಆದೇಶಿದ್ದಾರೆ.
ಎಲ್ಲಿದ್ದ ಆ ಪೊಲೀಸಪ್ಪ..?
ಮಾನ ಕಾಪಾಡಿದ ಪಿಎಸ್ಐ..!
ಘಟನೆ ನಡೆದ ತಕ್ಷಣ ಬೀಟ್ ಪೊಲೀಸರು ಕಾಕತಿ ಪೊಲೀಸ್ ಠಾಣಾಧಿಕಾರಿಗೆ ಸುದ್ದಿ ತಿಳಿಸಿದ್ದಾರೆ. ಇಂತಹ ಘಟನೆ ನಡೆದ ತಕ್ಷಣ ಸ್ವತಃ ಮುಖ್ಯಮಂತ್ರಿ ಸ್ಥಳಕ್ಕೆ ಬರುತ್ತಾರೆ. ಆದರೆ ಈ ಪೊಲೀಸಪ್ಪ ಮಾತ್ರ ಕಣ್ತುಂಬ ನಿದ್ದೆ ಮಾಡಿ ಬೆಳಗ್ಗೆ ಏಳೂವರೆ ಘಂಟೆ ಮೇಲೆ ಸ್ಥಳಕ್ಕೆ ಬಂದು ಪೋಸ್ ಕೊಟ್ಟಿದ್ದಾನೆ. ಅದಲ್ಲದೆ ತನ್ನ ಕೈಕೆಳಗೆ ಇರುವ ಸಿಬ್ಬಂದಿಗಳಿಗೆ ಮನಬಂದಂತೆ ಬೈದಿದ್ದಲ್ಲದೆ, ಇಂತಹ ಸಣ್ಣ ಘಟನೆಗಳನ್ನು ನೀವೇ ನಿಭಾಯಿಸಬೇಕು ನಮಗೆ ಹೇಳಬಾರದು ಎಂದು ಗದರಿಸಿದ್ದಾನೆ.
ಮಾನ ಕಾಪಾಡಿದ ಪಿಎಸ್ಐ..?
ಸುಮಾರು ಬೆಳಗಿನ ಜಾವ ನಾಲ್ಕೂವರೆ ಸುಮಾರಿಗೆ ಕಾಕತಿ ಪಿಎಸ್ಐ ಘಟನೆ ಸ್ಥಳಕ್ಕೆ ಹೋಗಿ ಮಹಿಳೆಯ ರಕ್ಷಣೆ ಮಾಡಿ ಕಾಕತಿ ಪೊಲೀಸರ ಮಾನ ಕಾಪಾಡಿದ್ದಾರೆ.
ಆದರೆ ಇಂತಹ ಘಟನೆಗಳು ನಡೆದಾಗ ಜವಾಬ್ದಾರಿ ತೆಗೆದುಕೊಳ್ಳಬೇಕಾದ ಠಾಣಾಧಿಕಾರಿಯೇ ಬೆಜವಾಬ್ದಾರಿಯಾಗಿದ್ದು ಈ ಪೊಲೀಸಪ್ಪನಿಗೆ ಹೊಸದೆನಲ್ಲ. ಯಾಕೆಂದರೆ ಈ ಮೊದಲು ಇಂತಹ ಘಟನೆಗಳು ನಡೆದಾಗ ಈತ ಮಾಡಿದ್ದು ಇದ್ದನ್ನೆ.
ಇಷ್ಟಾದರೂ ಕಮೀಷನರ್ , ಡಿಸಿಪಿ ಗಳ ಮುಂದೆ ಸುಳ್ಳು ಕಥೆ ಕಟ್ಟಿ ಹೀರೋ ಆಗಿದ್ದಾನೆ.
ಇಗಲಾದರೂ ಈ ಪೊಸ್ ಪೊಲೀಸಪ್ಪನ ವಿರುಧ್ಧ ಖಡಕ ಕಮೀಷನರ್ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕು.
*ಪ್ರೀತಿಸಿ ಓಡಿದ ಯುವಕ-ಯುವತಿ*
*ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ*
ಬೆಳಗಾವಿ:ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ ಬೆಳಗಾವಿ ತಾಲೂಕಿನ ಹೊಸವಂಟಮುರಿ ಗ್ರಾಮದಲ್ಲಿ ಇಂದು ನಡೆದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಯುವತಿಯೋರ್ವಳ ಮನೆಯವರು ಆಕೆಯ ಮದುವೆಯ ನಿಶ್ಚಿತಾರ್ಥ ಸಿದ್ಧತೆಯಲ್ಲಿದ್ದಾಗ ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾದ ಹಿನ್ನೆಲೆ ಯುವಕನ ತಾಯಿ ಕಮಲವ್ವ ನಾಯಕ(೪೪)ಅವರನ್ನು ಕಂಬಕ್ಕೆ ಕಟ್ಟಿಹಾಕಿ ಬೆತ್ತಲೆಗೊಳಿಸಿ ಥಳಿಸಿದ ಅಮಾನವೀಯ ಘಟನೆ ಸೋಮವಾರ ನಡೆದಿದೆ.
ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಪ್ರೀತಿಸಿದ ಜೋಡಿ ಮನೆ ಬಿಟ್ಟು ಹೋದ ಕಾರಣ ರೋಷಿದ ಯುವತಿಯ ಕುಟುಂಬಸ್ಥರು ಯುವಕನ ತಾಯಿಗೆ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.
ಯುವಕನ ತಾಯಿಗೆ, ಯುವತಿಯ ಕುಟುಂಬಸ್ಥರು ಕಂಬಕ್ಕೆ ಕಟ್ಟಿ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಒಂದೇ ಗ್ರಾಮದ ಯುವಕ-ಯುವತಿಯರಾದ ದುಂಡಪ್ಪ ಪ್ರಿಯಾಂಕಾ ಪರಸ್ಪರ ಪ್ರೀತಿಸುತ್ತಿದ್ದರು. ಭಾನುವಾರ ರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಆದರೆ ಇಂದು ಯುವತಿಯ ನಿಶ್ಚಿತಾರ್ಥ, ಮದುವೆ ನಿಗದಿ ಮಾಡಲು ಯುವತಿಯ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು.
ಏಕಾಏಕಿ ರೊಚ್ಚಿಗೆದ್ದ ಯುವತಿ ಕುಟುಂಬಸ್ಥರಿಂದ ಯುವಕನ ಮನೆ ಮೇಲೆ ಭಾನುವಾರ ದಾಳಿ ನಡೆಸಿ ರಾತ್ರೋರಾತ್ರಿ ಮನೆಯನ್ನು ಸಂಪೂರ್ಣ ದ್ವಂಸ ಗೊಳಿಸಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಬಳಿಕ ಗ್ರಾಮದಲ್ಲಿನ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಎರಡೂ ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.
ತಡರಾತ್ರಿ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣ ಸಂಬಂಧ 7 ಜನ ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಓಡಿ ಹೋಗಿರುವ ಯುವಕ, ಯುವತಿಯ ತಪಾಸಣೆ ಪೊಲೀಸರು ನಡೆಸಿದ್ದಾರೆ.
ಗ್ರಾಮದಲ್ಲಿ ನಾಗರಿಕ ಹಾಗೂ ಸಶಸ್ತ್ರ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಭೇಟಿ ನೀಡಿದರು.