ಬೆಳಗಾವಿಯ ಪ್ರತಿಷ್ಠಿತ ಉದ್ಯಮಿ ಸರಸ್ವತಿ ಪೇಪರ್ಸ್ ಹಾಗೂ ಸಂಘ್ವಿ ಆಭರಣ ಮಳಿಗೆ ಮಾಲಿಕ ಮೀನಾ ಮತ್ತು ವಿಜಯ ಸಾಂಘ್ವಿ ಅವರ ಸುಪುತ್ರಿ ಡಾ.ಅಲಿಶಾ ಮತ್ತು ಪುಣೆಯ ದಿ.ಗುಣವಂತಿ ಮತ್ತು ದಿ.ಸಮನಜೀ ಓಸ್ವಾಲ್ ಅವರ ಸುಪುತ್ರ ಡಾ.ಜಯ್ ಅವರ ಶುಭ ವಿವಾಹ ಖಂಡಲಾದಲ್ಲಿ ಶುಕ್ರವಾರ ನೆರವೇರಿತು.
ಖಂಡಾಲಾದ ಇಕ್ಸಾನಾ ರೆಸಾರ್ಟ್ ನಲ್ಲಿ ಜರುಗಿದ ಅದ್ದೂರಿ ಮದುವೆಯಲ್ಲಿ ಬೆಳಗಾವಿ, ಪುಣೆ, ಮುಂಬಯಿ ಸೇರಿದಂತೆ ಅನೆಕ ಗಣ್ಯರು ಉದ್ಯಮಿಗಳು ಆಗಮಿಸಿ ನೂತನ ವಧು ವರರಿಗೆ ಅಕ್ಕರತೆಯ ಅಕ್ಕಿಕಾಳಿನಿಂದ ಹಾರೈಸಿದರು.