ಬೆಳಗಾವಿ :
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅಗ್ನಿಪಥ್ ಯೋಜನೆ ಭಾಗವಾದ ಅಗ್ನಿವೀರ ವಾಯು ಮಹಿಳಾ ತಂಡ ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗುವ ಮೂಲಕ ಐತಿಹಾಸಿಕ ಸೃಷ್ಟಿಸಿದೆ.
ಶನಿವಾರ ಬೆಳಗಾವಿಯ ಏರ್ಮನ್ ತರಬೇತಿ ಶಿಬಿರದಲ್ಲಿ ಕಳೆದ 22 ತಿಂಗಳಿನಿಂದ ವಿಶೇಷ ತರಬೇತಿ ಪಡೆದಿದ್ದ 153 ಯುವತಿಯರ ಮೊದಲ ಅಗ್ನಿವೀರ ವಾಯು ತಂಡದ ನಿರ್ಗಮನ ಪಥಸಂಚಲನ ನಡೆಸಿತು. ಈ ಮೂಲಕ ಭಾರತೀಯ ವಾಯುಸೇನೆಗೆ ಸೇರ್ಪಡೆಯಾದ ಮೊದಲ ಅಗ್ನಿವೀರ ಮಹಿಳಾ ತಂಡ ಎಂಬ ಹಿರಿಮೆಗೆ ಸಾಕ್ಷಿಯಾಯಿತು.
ಕಳೆದ ಆರು ತಿಂಗಳ ಅವಧಿಗೆ ನಡೆದ ಅಗ್ನಿವೀರ ವಾಯು ತರಬೇತಿ ಶಿಬಿರದಲ್ಲಿ 153 ಯುವತಿಯರು ಹಾಗೂ 2280 ಯುವಕರ ತಂಡ ಕಠಿಣ ಪರಿಶ್ರಮದ ಮೂಲಕ ತರಬೇತಿ ಪಡೆದು ಶನಿವಾರ ಬೆಳಗಾವಿ ಏರ್ಮನ್ ಟ್ರೈನಿಂಗ್ ಸೆಂಟರ್ ನಲ್ಲಿ ನಿರ್ಗಮನ ಪಥಸಂಚಲನ ನಡೆಸಿದರು. ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ವಿತರಣೆ ನಡೆಯಿತು.
ಅಗ್ನಿವೀರರ ನಿರ್ಗಮನ ಪಥಸಂಚಲನ ಗೌರವ ಸ್ವೀಕರಿಸಿ ಮಾತನಾಡಿದ ಏರ್ ಮಾರ್ಷಲ್ ರಾಧಾಕೃಷ್ಣ, ಕೇವಲ ಆರು ತಿಂಗಳ ಅವಧಿಯಲ್ಲಿ ತರಬೇತಿ ಪಡೆದ ಅಗ್ನಿವೀರರು ತಮ್ಮನ್ನು ಕಠಿಣ ಸವಾಲುಗಳಿಗೆ ಒಡ್ಡಬೇಕಾಗುತ್ತದೆ.
ಜಗತ್ತಿಗ ನಾಲ್ಕನೇ ಅತಿ ದೊಡ್ಡ ವಾಯುಸೇನೆಗೆ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸಿಕೊಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.