ಬೆಳಗಾವಿ :
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ಇಲಾಖೆ, ಕೃಷಿ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ (ರಿ) ಹಾಗೂ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಪ್ರಸಕ್ತ ಸಾಲಿನ 64 ನೇ ಫಲಪುಷ್ಪ ಪ್ರದರ್ಶನವನ್ನು ಡಿ. 8-10 ರವರೆಗೆ ಕ್ಲಬ್ ರಸ್ತೆಯ ಹ್ಯೂಮ್ ಪಾರ್ಕ್ ನಲ್ಲಿ ಏರ್ಪಡಿಸಲಾಗಿದೆ.
ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಉದ್ಘಾಟಿಸುವರು. ಸಚಿವರಾದ ಶರಣಬಸಪ್ಪ ದರ್ಶನಾಪುರ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಗಣ್ಯ ಮಾನ್ಯರು ಉಪಸ್ಥಿತರಿರುವರು.
ಪ್ರಗತಿ ಪರ ರೈತರು ಬೆಳೆದ ವಿಶೇಷ ಗುಣಮಟ್ಟ ಹೊಂದಿರುವ ತರಕಾರಿ, ಹಣ್ಣು, ಹೂವು, ಸಾಂಬಾರು ಹಾಗೂ ಪ್ಲ್ಯಾಂಟೆಶನ್ ಬೆಳೆಗಳನ್ನು ಪ್ರದರ್ಶಿಸಲಾಗುವುದು. ವಿವಿಧ ಜಾತಿಯ ಹೂವುಗಳಿಂದ ಅಲಂಕೃತ ಕಲಾಕೃತಿಗಳು, ಉಸುಕಿನ ಕಲೆ, ಹೂವು ಜೋಡಣೆ, ಕುಂಡಗಳ ಜೋಡಣೆ, ವಿದೇಶ ಹೂವುಗಳ ಪ್ರದರ್ಶನ, ಬೋನ್ಸಾಯ್ ಪ್ರದರ್ಶನ, ಕಟ್ ಹೂವುಗಳ ಪ್ರದರ್ಶನ, ತರಕಾರಿ/ಹಣ್ಣು ಕೆತ್ತನೆ ಪ್ರದರ್ಶಿಸಲಾಗುವುದು. ಫಲಪುಷ್ಪ ಪ್ರದರ್ಶದಲ್ಲಿ 25 ಕ್ಕೂ ಹೆಚ್ಚು ಗ್ರಾಮೀಣ ಮತ್ತು ಸಣ್ಣ ಉದ್ಯಮ/ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಜೆ 6 ರಿಂದ 8.30 ಗಂಟೆವರೆಗೆ ಆಯೋಜಿಸಲಾಗಿದೆ. 8 ರಂದು ಬೆಳಿಗ್ಗೆ 9 ಗಂಟೆಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ಭಾಗವಹಿಸಬಹುದು. ಫಲಪುಷ್ಪ ಪ್ರದರ್ಶನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8.30 ಗಂಟೆವರೆಗೆ ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಗೆ ಗ್ರಾಮೀಣ ಕ್ರೀಡೆ, ಕುಂಬಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸಾರ್ವಜನಿಕರು/ ರೈತ ಬಾಂಧವರು ಭಾಗವಹಿಸಲು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಬೆಳಗಾವಿ ಕೋರಿದ್ದಾರೆ. ಮಾಹಿತಿಗೆ ದೂ :
0831-2451422 ಸಂಪರ್ಕಿಸಬಹುದು.