ಬೆಳಗಾವಿ:
ಮತ್ತೆ ಕೊವಿಡ್ ಪ್ರೋಟೊಕಾಲ್ ಪಾಲಿಸುವ ಬಗೆಯ ಮತ್ತೊಂದು ಭಯಾನಕ ಪ್ಲ್ಯೂ ಜ್ವರದ ಬಗ್ಗೆ ರಾಜ್ಯ ಆರೋಗ್ಯ ಆಯುಕ್ತರು ಸಾರ್ವಜನಿಕ ಎಚ್ಚರಿಕೆ ವಹಿಸುವ ಮಾರ್ಗಸೂಚಿ ಹೊರಡಿಸಿದ್ದಾರೆ.
ಇನ್ಫ್ಲೂಂಜಾ, ನಿಮೋನಿಯಾ, ಸಾರ್ಕ್, ಮೈಕೋಪ್ಲಾಸ್ಮಾ ಮಾದರಿಯಲ್ಲಿ ಇನ್ನೊಂದು ಶ್ವಾಸಕೋಶ ಬಾಧಿಸುವ ಖಾಯಿಲೆ ಬೆಳಕಿಗೆ ಬಂದಿದೆ, ಇದು ಜನರನ್ನು ನೆರೆಯ ಚೀನಾದಲ್ಲಿ ತೀವ್ರ ಬಾಧಿಸುತ್ತಿದೆ ಎಂದು WHO ಖಚಿತ ವರದಿ ಉಲ್ಲೇಖಿಸಿ ಆಯುಕ್ತರು ಎಚ್ಚರಿಸಿದ್ದಾರೆ.
ಮಕ್ಕಳು ಸಹಿತ ಎಲ್ಲರನ್ನೂ ಶ್ವಾಸಕೋಶ ಬಾಧಿಸುವ ಈ ಸಾಂಕ್ರಾಮಿಕದಿಂದ ರಕ್ಷಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿ ಮಾರ್ಗದರ್ಶಿ ನೀಡಿದೆ.
ಪ್ರತಿಯೊಬ್ಬರು ಮೂಗು-ಬಾಯಿ ಮಾಸ್ಕ್ ಮೂಲಕ ಮುಚ್ಚುವುದು, ಸತತ ಸಾಬೂನಿನಿಂದ ಕೈ ತೊಳೆಯುವುದು, ಕಣ್ಣು-ಮೂಗು ಬಾಯಿಯನ್ನು ಮುಟ್ಟಿಕೊಳ್ಳಬಾರದು, ಜನಜಂಗುಳಿಯ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಬಾರದು, ಪರಸ್ಪರ ಅಂತರ ಪ್ರತಿಯೊಬ್ಬರು ಕಾಯ್ದುಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು, ಪ್ರವಾಸ ಕಡಿಮೆ ಮಾಡುವುದು, ಸಾಕಷ್ಟು ಶುದ್ಧ ನೀರು ಕುಡಿಯಬೇಕು, ಸತ್ವಯುತ ಆಹಾರ ಸೇವಿಸಬೇಕು, ದೈಹಿಕ ವ್ಯಾಯಾಮ ಮತ್ತು ಚಟುವಟಿಕೆಯಿಂದ ಇರಬೇಕು ಎಂದು ಸಾರ್ವಜನಿಕರಿಗೆ ಸರಕಾರ ಸೂಚಿಸಿದೆ.