ಬೆಳಗಾವಿ :
112 ಪೊಲೀಸ್ ವಾಹನದ ಕರ್ತವ್ಯ ನಿರತ ಇಬ್ಬರು ಪೊಲೀಸರು 112 ಹೈವೇ ಪೆಟ್ರೋಲಿಂಗ್ ಸರ್ಕಾರಿ ವಾಹನ ತಮ್ಮ ಬಳಿ ಇರುವಾಗಲೇ ಖಾಕಿ ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಳೇದ ಅವರು ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದ ಹೊರವಲಯದಲ್ಲಿ ಸಿಬ್ಬಂದಿ ಎರಡನೇ ಪಾರ್ಟಿಯಲ್ಲಿ ತೊಡಗಿದ್ದರು. ಜತೆಗೆ ಮಾಂಸಾಹಾರ ಮಾಡುತ್ತಿರುವುದು ಕಂಡುಬಂದಿತ್ತು. ಕೆಎ 22 ಜಿ 1818 ಸಂಖ್ಯೆಯ 112 ವಾಹನದ ಪೊಲೀಸ್ ಕಾನ್ಸ್ಟೇಬಲ್ ಆದ ಕಮತೆ ಮತ್ತು ಧುಮಾಳ ಈ ಕೃತ್ಯದಲ್ಲಿ ತೊಡಗಿದ್ದರು.