ಬೆಂಗಳೂರು:
ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿರುವ ಡಾ.ಎಂ.ಎಂ.ಕಲಬುರ್ಗಿ ಟ್ರಸ್ಟ್ ಗೆ ಡಾ.ವೀರಣ್ಣ ರಾಜೂರ ಅವರ ಅಧ್ಯಕ್ಷತೆಯಲ್ಲಿ 9 ಸದಸ್ಯರ ಸಮಿತಿ ರಚಿಸಿ ಸರ್ಕಾರ ಆದೇಶಿಸಿದೆ.
ಸದಸ್ಯರಾಗಿ ಡಾ. ಎಂ.ಎಂ. ಕಲಬುರ್ಗಿ ಪುತ್ರ ಶ್ರೀವಿಜಯ ಕಲಬುರ್ಗಿ ಸೇರಿದಂತೆ ಶಶಿಧರ ತೋಡ್ಕರ, ಹನುಮಾಕ್ಷಿ ಗೋಗಿ, ಡಾ.ಎಚ್. ಎಸ್.ಮೇಲಿನಮನಿ, ಡಾ. ಬಾಲಣ್ಣ ಶೀಗಿಹಳ್ಳಿ, ಡಾ. ಸಿದ್ದನಗೌಡ ಪಾಟೀಲ, ಪ್ರೊ. ಚಂದ್ರಶೇಖರ ವಸ್ತ್ರದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧಾರವಾಡದ ಸಹಾಯಕ ನಿರ್ದೇಶಕರ ನೇಮಕ ಮಾಡಲಾಗಿದೆ.