ಗ್ರಾಮೀಣ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿಸಿರುವ ಅಗಸಗಿ ದೈಹಿಕ ಶಿಕ್ಷಕ NB ಪಾಟೀಲಗೆ ಅದ್ದೂರಿ ಸನ್ಮಾನ..!
ವಿವಿಧ ಸಂಘಟನೆ, ಹಳೆ ವಿಧ್ಯಾರ್ಥಿಗಳು, ಗ್ರಾಮಸ್ಥರು, ಅಭಿಮಾನಿಗಳಿಂದ ದಂಪತಿಗೆ ಸತ್ಕಾರ ಸಮಾರಂಭ..!
ಬೆಳಗಾವಿ :ತಾಲೂಕಿನ ಅಗಸಗಿ ಗ್ರಾಮದಲ್ಲಿರುವ ಅಗಸಗಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ನಿಂಗನಗೌಡ ಬಸನಗೌ ಪಾಟೀಲರು ಹಗಲು ರಾತ್ರಿ ಶ್ರಮಿಸಿ ಗ್ರಾಮೀಣ ಭಾಗದಲ್ಲಿರುವ ವಿಧ್ಯಾರ್ಥಿಗಳನ್ನು ಗುರುತಿಸಿ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ದೈಹಿಕ ಶಿಕ್ಷಕ NB ಪಾಟೀಲ ಹಾಗೂ ಪತ್ನಿ ಶಿಕ್ಷಕಿ ವಿಧ್ಯಾ ಕೌಜಲಗಿ ದಂಪತಿಗಳಿಗೆ ಸಮಸ್ತ ಅಗಸಗಿ ಗ್ರಾಮಸ್ಥರು, ವಿವಿಧ ಸಂಘಟನೆ, ಹಳೆ ವಿಧ್ಯಾರ್ಥಿಗಳು, ಶಿವಾಪೂರ, ಕುರಿಹಾಳ, ಮಾಳೆನಟ್ಟಿ, ಬೊಡಕೆನಟ್ಟಿ ಹಾಗೂ ಅಗಸಗಿ ಶಾಲೆಯಲ್ಲಿ ಕಲಿತ ವಿಧ್ಯಾರ್ಥಿಗಳು ಹಾಗೂ NB ಪಾಟೀಲ ಅಭಿಮಾನಿ ಬಳಗದಿಂದ ಅದ್ದೂರಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ದಂಪತಿಗಳನ್ನು ಸನ್ಮಾನಿಸಿ ಅಗಸಗಿ ಗ್ರಾ ಪಂ ಅಧ್ಯಕ್ಷ ಅಮೃತ ಮುದ್ದಣ್ಣವರ, ಮುಖಂಡ ಮಲಗೌಡ ಪಾಟೀಲ, ಸಂತೋಷ ಮೆತ್ರಿ, ಶಿಕ್ಷಕ ರವೀಂದ್ರ ಮಧಾಳೆ, ಭರತ ಬಳ್ಳಾರಿ, ದಲಿತ ಮುಖಂಡ ಶಿವಪುತ್ರ ಮೈತ್ರಿ ಸೇರಿ ಹಲವರು ಪಾಟೀಲ ಶಿಕ್ಷಕರು ಯಾವ ರೀತಿ ಅಗಸಗಿ ಪ್ರೌಢಶಾಲೆಗಾಗಿ ಕಳೆದ 27 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿ ವಿಧ್ಯಾರ್ಥಿಗಳ ಭವಿಷ್ಯ ರೂಪಿಸಿ ಗ್ರಾಮ ಹಾಗೂ ಶಾಲೆಗೆ ಕೀರ್ತಿ ತಂದಿದ್ದಕ್ಕಾಗಿ ಹೆಮ್ಮೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ದಂಪತಿಗಳು ಎಲೆ ಮರೆ ಕಾಯಿಯಂತಿದ್ದ ನಮ್ಮನ್ನು ಗುರುತಿಸಿ ಅಗಸಗಿಯಲ್ಲಿ ಸನ್ಮಾನಿಸಿದ ಸಮಸ್ತರಿಗೆ ಹೃದಯಪೂರ್ವಕಾಗಿ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರಾದ ಅಪ್ಪಯ್ಯಗೌಡ ಪಾಟೀಲ, ಗುಂಡು ಕರೆನ್ನವರ, ಯಲ್ಲಪ್ಪಾ ಪಾಟೀಲ, ಭೈರು ಕಂಗ್ರಾಳಕರ, ಸನ್ಮಾನ ಸಮಾರಂಭದ ಅಭಿಮಾನಿ ಬಳಗದ ನಿರ್ವಾಣಿ ಕುರಬೇಟ, ಸುಭಾಷ್ ಪಾಟೀಲ, ಗೌಡಪ್ಪಾ ಪಾಟೀಲ, ಸಂತೋಷ ಮೈತ್ರಿ, ಬಾಳೇಶ ನಾವಿ, ಮೋಹನ ರೇಡೆಕರ, ಲಕ್ಷ್ಮಣ ಕಂಗ್ರಾಳಕರ, ಜೀವಪ್ಪಾ ಬಡಿಗೇರ, ಅನಂತ ಪಾಟೀಲ , ಸುಧೀರ್ ಗಡಕರಿ, ಅರ್ಜುನ್ ಕಾಂಬಳೆ ಸಮಸ್ತ ಅಗಸಗಿ ಗ್ರಾಮಸ್ಥರು, ವಿವಿಧ ಸಂಘಟನೆಯವರು, ಹಳೆ ವಿಧ್ಯಾರ್ಥಿಗಳು, ಅಗಸಗಿ ಶಾಲೆಯಲ್ಲಿ ಕಲಿಯುತ್ತಿರುವ ಶಿವಾಪೂರ, ಕುರಿಹಾಳ, ಮಾಳೆನಟ್ಟಿ, ಬೊಡಕೆನಟ್ಟಿ ಹಾಗೂ ಅಗಸಗಿ ಗ್ರಾಮದ ವಿಧ್ಯಾರ್ಥಿಗಳು ಮತ್ತು ಪಾಲಕರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.