ಸುಳೇಭಾವಿ ಡಬಲ್ ಮರ್ಡರ್ ಕೇಸ್..!
ಎಸ್ ಬಿ ಹಾಗೂ ಬೀಟ್ ಪೊಲೀಸ ಸಿಬ್ಬಂದಿ ಸಸ್ಪೆಂಡ್..!
ಎಲ್ಲ ಬಿಟ್ ಪೊಲೀಸರಿಗೆ ಬಿಸಿ ಮುಟ್ಟಿಸಿದ ಕಮಿಷನರ್ ..?
ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಈ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಕೊಲೆ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದರೂ ಅವುಗಳನ್ನು ಹತೋಟಿಗೆ ತರದೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮಾರೀಹಾಳ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.
ಮಾರಿಹಾಳ ಠಾಣೆಯ ಎಸ್ ಬಿ ಹೆಡ್ ಕಾನ್ಸಟೇಬಲ್ ಬಿ.ಎನ್. ಬಳಗಣ್ಣವರ ಹಾಗೂ ಸುಳೇಭಾವಿ ಗ್ರಾಮದ ಬೀಟ್ ಪೊಲೀಸ್ ಕಾನ್ಸಟೇಬಲ್ ಆರ್.ಎಸ್. ತಳೇವಾಡ ಅಮಾನತ್ತಾದ ಪೊಲೀಸರು.
ಎಸ್ ಬಿ ಹಾಗೂ ಬೀಟ್ ಪೊಲೀಸರಾಗಿ ಈ ಇಬ್ಬರೂ ಕರ್ತವ್ಯ ಲೋಪ ಎಸಗಿದ್ದಾರೆ. ಗ್ರಾಮದಲ್ಲಿ ಆಗು ಹೋಗುಗಳ ಬಗ್ಗೆ ಸರಿಯಾಗಿ ಮಾಹಿತಿ ಇದ್ದರೂ ತಿಳಿಸದೆ ಹೆಚ್ಚಿನ ಮಾಹಿತಿ ಸಂಗ್ರಹಿಸದೇ ಬೇಜವಾಬ್ದಾರರಾಗಿದ್ದಕ್ಕೆ ಇವರನ್ನು ಅಮಾನತ್ತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸುಳೇಭಾವಿ ಗ್ರಾಮದಲ್ಲಿ ಗುರುವಾರ ಅ: 6 ರಂದು ರಾತ್ರಿ ರಣಧೀರ ಮಹೇಶ ಅಲಿಯಾಸ್ ರಾಮಚಂದ್ರ ಮುರಾರಿ(26) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿ ಪಾಟೀಲ(24) ಎಂಬ ಇಬ್ಬರು ಯುವಕರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದರ ಬೆನ್ನಲೆ ಕಮಿಷನರ್ ಅವರು ಸಂಪೂರ್ಣ ಮಾಹಿತಿ ಪಡೆದಾಗ ಪೊಲೀಸರ ವೈಫಲ್ಯ ಕಂಡು ಬಂದಿದ್ದರಿಂದ ಕ್ರಮ ಕೈಕೊಂಡಿದ್ದಾರೆ. ಮತ್ತು ಎಲ್ಲ ಠಾಣೆಯ ಬೀಟ್ ಪೊಲೀಸರಿಗೆ ಖಡಕ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಇನ್ನೂ ಕಮೀಷನರ್ ವ್ಯಾಪ್ತಿಯಲ್ಲಿನ ಹಲವು ಠಾಣೆಗಳಲ್ಲಿ ಎಸ್ ಬಿ ಹಾಗೂ ಬೀಟ್ ಪೊಲೀಸರು ಕೇವಲ ಹಪ್ತಾ ವಸೂಲಿಗೆ ಸಿಮಿತವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಖಡಕ ಅಧಿಕಾರಿಗಳಾಗಿರುವ ಕಮೀಷನರ್ ಹಾಗೂ ಡಿಸಿಪಿಗಳು ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.