ಬೆಳಗಾವಿ : ನಿನ್ನೆ ರಾತ್ರಿ ಕಾಕತಿ ಪೊಲೀಸ ಠಾಣೆಯ ಎದುರು ಸಂಭವಿಸಿದ ರಸ್ತೆ ಅಪಘಾತದಲ್ಲಿ APMC ಪೊಲೀಸ್ ಪೇದೆ ಸಾವನ್ನಪ್ಪಿದ್ದಾರೆ.
ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ನಿವಾಸಿಯಾದ 35 ವರ್ಷ ದ ಫಕ್ಕೀರಪ್ಪಾ ಅರ್ಜುನ ಉಪ್ಪಾರಟ್ಟಿ ಅಪಘಾತದಲ್ಲಿ ಸಾವನ್ನಪ್ಪಿರುವ ದುರ್ದೈವಿ.
ನಿನ್ನೆ ರಾತ್ರಿ ಸುಮಾರು 11.30 ಕ್ಕೆ APMC ಠಾಣೆಗೆ ಕರ್ತವ್ಯ ನಿರ್ವಹಿಸಲು ಹೋಗುವ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ನಿಂತಾಗ ದ್ವಿಚಕ್ರ ವಾಹನ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಪೇದೆ ಮೃತಪಟ್ಟಿದ್ದಾರೆ.
ಮೃತರಿಗೆ ತಂದೆ, ತಾಯಿ, ಅಣ್ಣ, ಪತ್ನಿ ಸೇರಿ ಅಪಾರ ಬಂಧು ಬಗಳ ಇದ್ದಾರೆ.