ಬೆಳಗಾವಿ :
ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ಬಗ್ಗೆ ನಾಗರಿಕರಿಗೆ ವಿಶೇಷ ಸೂಚನೆ ನೀಡಿದೆ. ಈ ಬಗ್ಗೆ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಹೆಸರು ನೋಂದಣಿ ಹಾಗೂ ಪರಿಷ್ಕರಣೆ ಕುರಿತು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರ ಸೂಚನೆ ಮೇರೆಗೆ ಪಾಲಿಕೆಯ ಉಪ ಆಯುಕ್ತ ಉದಯಕುಮಾರ ತಳವಾರ ಅವರು ನಾಗರಿಕರಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರಿರುವುದನ್ನು ಈ ಕೂಡಲೇ ಪರಿಶೀಲಿಸಬೇಕು.
ದಿನಾಂಕ: 09-12-2023 ರವರೆಗೆ ಹೆಸರು ಸೇರಿಸಲು ಅವಕಾಶವಿದೆ. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಸೇರ್ಪಡೆ, ಬದಲಾವಣೆ ಮಾಡಬಯಸಿದ್ದಲ್ಲಿ ಮತದಾರರ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ವರ್ಷಕ್ಕೆ ಒಂದಲ್ಲ ಈಗ ನಾಲ್ಕು (4) ಅರ್ಹತಾ ದಿನಾಂಕಗಳು ನೀಡಿದೆ.
ವಿಶೇಷ ನೋಂದಣಿ ಅಭಿಯಾನದ ದಿನಾಂಕಗಳು :
18-11-2023 (ಶನಿವಾರ),
19-11-2023 (ಭಾನುವಾರ),
02-12-2023 (ಶನಿವಾರ),
03-12-2023 (ಭಾನುವಾರ)
ಸ್ಥಳ : ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ, ಸಮಯ : ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ
ಪಾಲಿಕೆ ಉಪ ಆಯುಕ್ತ , (ಆಡಳಿತ) ಹಾಗೂ ಬೆಳಗಾವಿ ಉತ್ತರದ ಎ.ಇ.ಆರ್.ಓ ಉದಯಕುಮಾರ ತಳವಾರ ಜನ ಜೀವಾಳಕ್ಕೆ ತಿಳಿಸಿದ್ದಾರೆ.
ಉಪ ಆಯುಕ್ತರು ವ್ಯವಸ್ಥಿತ ಪ್ರಚಾರ ಕೈಗೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಆಯುಕ್ತ ಅಶೋಕ ದುಡಗುಂಟಿ ಕೂಡ ವ್ಯಾಪಕ ಪ್ರಚಾರದ ಯೋಜನೆ ರೂಪಿಸಲು ಸಿಬ್ಬಂದಿಗೆ ಸೂಚಿಸಿದ್ದಾರೆ.