ಬೆಂಗಳೂರು :
ಕೆಇಎ ಪರೀಕ್ಷಾ ಹಗರಣದ ಆರೋಪಿ ರುದ್ರಗೌಡ ಪಾಟೀಲ್ನನ್ನು ಕೊನೆಗೂ ಬಂಧಿಸಲಾಗಿದೆ. ಕಲಬುರಗಿ ಜಿಲ್ಲಾ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಅಫಜಲಪುರ-ಮಹಾರಾಷ್ಟ್ರ ಗಡಿಯಲ್ಲಿ ಪಾಟೀಲ್ನನ್ನು ಬಂಧಿಸಿದೆ. ಬಂಧಿಸಲು ಪೊಲೀಸರು ಆಗಮಿಸಿದ್ದ ವೇಳೆ ಕಂಪೌಂಡ್ ಹಾರಿ ಪರಾರಿಯಾಗಿದ್ದ ರುದ್ರಗೌಡ ಪಾಟೀಲ್, ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ.
ರುದ್ರಗೌಡ ಪಾಟೀಲ್ನನ್ನು ಪೊಲೀಸರು ಬಂಧಿಸಿ ಕಲಬುರಗಿಗೆ ಕರೆತಂದಿದ್ದಾರೆ. ಈತ ನವೆಂಬರ್ 6ರಂದು ಕಲಬುರಗಿಯ ವರ್ಧಾ ಲೇಔಟ್ನಲ್ಲಿರುವ ಮಹಾಲಕ್ಷ್ಮೀ ಅಪಾರ್ಟ್ಮೆಂಟ್ ಕಾಂಪೌಂಡ್ ಹಾರಿ ಪರಾರಿಯಾಗಿದ್ದ.
ನವಂಬರ್ 6 ರಂದು ಕಂಪೌಂಡ್ ಹಾರಿ ಪರಾರಿಯಾಗಿದ್ದ ಆರ್ಡಿ ಪಾಟೀಲ್, ಜೈಲಿನಿಂದ ಹೊರಗಡೆ ಇದ್ದುಕೊಂಡೇ ಜಾಮೀನು ಪಡೆಯಲು ಯತ್ನಿಸಿದ್ದ. ಜಾಮೀನು ಅರ್ಜಿಯನ್ನು ಜಾಮೀನು ಅರ್ಜಿಯನ್ನು ಕಲಬುರಗಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನವೆಂಬರ್ 7ರಂದು ತಿರಸ್ಕರಿಸಿತ್ತು. ಮತ್ತೊಂದಡೆ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಅರ್ಜಿ ವಿಚಾರಣೆ ನವಂಬರ್ 16 ಕ್ಕೆ ಮುಂದೂಡಿಕೆಯಾಗಿದೆ.
ಕೆಇಎ ಪರೀಕ್ಷೆ ಕಿಂಗಪಿನ್ ರುದ್ರಗೌಡ ಪಾಟೀಲ್ ಬಂಧನಕ್ಕೆ ಪೊಲೀಸರಿಗೆ ಸಿಐಡಿ ಅಧಿಕಾರಿಗಳ ಮಾಹಿತಿ ಸಹಕಾರಿಯಾಗಿದೆ. ಈ ಹಿಂದೆ ಪಿಎಸ್ಐ ಅಕ್ರಮದಲ್ಲಿ ರುದ್ರಗೌಡನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಹೀಗಾಗಿ ಅವರಲ್ಲಿ ಆತನ ಬಗ್ಗೆ ಹೆಚ್ಚು ಮಾಹಿತಿ ಇದ್ದವು. ಕಲಬುರಗಿಯಲ್ಲಿರೋ ಕೆಲ ಸಿಐಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದ ಕಲಬುರಗಿ ಪೊಲೀಸರು ಆತನ ಅಡಗುತಾಣ, ಆತನ ಸಹಚರರ ಬಗ್ಗೆ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆ ನಡೆಸಿದ್ದರು.