ಬೆಳಗಾವಿ :
ರಾಜ್ಯ ಆಯುಕ್ತಾಲಯದ ಕಾರ್ಯಾಲಯ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇವರು ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗುತ್ತಿರುವ ವಿವಿಧ ಬ್ರಾಂಡುಗಳ ಹಾಲಿನ ಗುಣಮಟ್ಟ ಪರೀಕ್ಷಿಸಿ ಪ್ರಯೋಗಾಲಯಗಳಿಗೆ ಗುಣ ವಿಶ್ಲೇಷಣೆಗೆ ಕಳುಹಿಸುವ ಬಗ್ಗೆ ಸೂಚಿಸಿದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲೂ
ಎಫ್ಎಸ್ಎಸ್ಎಐ
ಅಧಿಕಾರಿಗಳು ವಿವಿಧ ಕಂಪನಿಗಳ ಹಾಲು ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದಾರೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ, ಮಹಾಮಂಡಳಿ ನಿಯಮಿತ ಇವರು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಮಾರಾಟ ಕೇಂದ್ರಗಳಲ್ಲಿ ಮಾರಾಟವಾಗುತ್ತಿರುವ ಖಾಸಗಿ ಹಾಲಿನ ಮಾದರಿಗಳನ್ನು ಕಹಾಮ ಜಿಲ್ಲಾ ಹಾಲು ಒಕ್ಕೂಟಗಳ ಘಟಕಗಳ ಡೇರಿಗಳಲ್ಲಿ ಪರೀಕ್ಷಿಸಿದ್ದು, ಏಪ್ರಿಲ್, ಮೇ, ಜೂನ್ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಪರೀಕ್ಷಾ ವರದಿಯನ್ನು ಪರೀಕ್ಷಿಸಿದ್ದಾರೆ. ಖಾಸಗಿ ಬ್ರಾಂಡುಗಳ ಮಾದರಿಗಳಲ್ಲಿ ಗುಣಮಟ್ಟವು ಎಫ್ಎಸ್ಎಸ್ಎಐ ಮಾನದಂಡಗಳ ಅನುಸಾರವಾಗಿರುವುದಿಲ್ಲ, ಇಂತಹ ಹಾಲನ್ನು ಬಳಸಿದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮವನ್ನು ಜರುಗಿಸುವಂತೆ ಕೋರುತ್ತಾರೆ.
ಬಂದಿರುವಂತಹ ಮಾದರಿಗಳನ್ನೊಳಗೊಂಡಂತೆ ವಿವಿಧ ಬ್ರಾಂಡುಗಳ ಹಾಲಿನ ಮಾದರಿಗಳು ಸೇರಿದಂತೆ ಕಾನೂನಾತ್ಮಕ ಪಾಲಿನ ಮಾದರಿಗಳನ್ನು ಪ್ರತಿ ಜಿಲ್ಲೆಯಲ್ಲಿ ಒಟ್ಟು 5 ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 10 ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಒಂದು ವಾರದೊಳಗಾಗಿ ಕಳುಹಿಸಲು ಸೂಚಿಸಲಾಗಿತ್ತು.
ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಿವಿಧ ಕಂಪನಿಗಳ ಹಾಲು ಮಾದರಿ ಸಂಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಮತ್ತು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಬಳಸುವ ಬಹುತೇಕ ಎಲ್ಲಾ ಹಾಲಿನ ಪ್ಯಾಕೆಟ್ಗಳನ್ನು ಕೆಎಂಎಫ್ ಸಂಸ್ಥೆಯು ಗುಣಮಟ್ಟದಿಂದ ಕೂಡಿಲ್ಲ ಎಂದು ಪತ್ತೆ ಹಚ್ಚಿದೆ.
ಬೆಳಗಾವಿ ಜಿಲ್ಲೆಯಲ್ಲಿ
ಎಫ್ಎಸ್ಎಸ್ಎಐ
ಅಧಿಕಾರಿಗಳು ಇವುಗಳ ಮಾದರಿಯನ್ನು ಸಂಗ್ರಹಿಸಿದ್ದಾರೆ. ಇವುಗಳ ವರದಿ ಬಂದ ನಂತರ ಈ ಹಾಲು ಆರೋಗ್ಯಕ್ಕೆ ಅಸುರಕ್ಷಿತವಾಗಿದ್ದರೆ ಪ್ರಕರಣವನ್ನು ದಾಖಲಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಿತ್ಯ, ಆರೋಕ್ಯ, ಗೋವಿಂದ, ಸ್ಪೂರ್ತಿ, ಗೋಕುಲ್, ಕ್ಲಾಸಿಕ್, ವೈಟ್ ಗೋಲ್ಡ್, ರಾಧಿಕಾ ಹಾಲು, ಶಿವ ಹಾಲು, ಸಂಗಮ್, ಗೋಪಿ, ಅಮುಲ್ ತಾಜಾ
ಸೇರಿವೆ.
ಕಳೆದ 3 ದಿನಗಳಿಂದ ಈ ವಿಭಿನ್ನ ಹಾಲಿನ ಮಾದರಿಗಳನ್ನು ಸಂಗ್ರಹಿಸುತ್ತಿದ್ದೇವೆ.
ಅಥಣಿ, ಬೈಲಹೊಂಗಲ, ಗೋಕಾಕ, ಘಟಪ್ರಭಾ ಮತ್ತು ಬೆಳಗಾವಿ ನಗರ ಮತ್ತು ಬೆಳಗಾವಿ ಗ್ರಾಮಾಂತರದಲ್ಲಿ ಇವುಗಳನ್ನು ಸಂಗ್ರಹಿಸಲಾಗಿದೆ
ಎಂದು ಅಧಿಕಾರಿಗಳು ತಿಳಿಸಿದ್ದಾರೆ.