ಬೆಳಗಾವಿ :
ಕನ್ನಡಪರ ಹೋರಾಟಗಾರರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ಒಟ್ಟು 25 ಮಹನೀಯರನ್ನು ನವೆಂಬರ್ 1 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ, ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಪ್ರತಿವರ್ಷದಂತೆ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಗೌರವಿಸಲಾಗುತ್ತದೆ.
ಅದೇ ಪ್ರಕಾರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಹರ್ಷಲ್ ಭೋಯರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಈ ಬಾರಿಯ ಸನ್ಮಾನಿತರನ್ನು ಆಯ್ಕೆ ಮಾಡಿರುತ್ತದೆ.
ಕನ್ನಡಪರ ಹೋರಾಟಗಾರರು:
ಕನ್ನಡಪರ ಹೋರಾಟಗಾರರಾದ ಬೆಳಗಾವಿಯ ಪಂಚಾಕ್ಷರಿ ಶ್ರೀಶೈಲ್ ಹಿರೇಮಠ, ರಾಜು ಕುಬೇರ ಭಾವಿ, ಭಾವಕಣ್ಣ ಭಂಗ್ಯಾಗೋಳ(ನಾಯಕ), ಸುರೇಶ ಲಗಮಪ್ಪ ಗವನ್ನವರ, ಬಾಳು ಈರಪ್ಪ ಜಡಗಿ, ಮಲ್ಲೇಶ ಚೌಗಲೆ ಹಾಗೂ ಬೈಲಹೊಂಗಲದ ಮಹಾಂತೇಶ ತುರಮುರಿ ಇವರನ್ನು ಸನ್ಮಾನಿಸಲಾಗುವುದು.
ಮಾಧ್ಯಮ ಪ್ರತಿನಿಧಿಗಳು:
ಮಾಧ್ಯಮ ಕ್ಷೇತ್ರದ ವಿವಿಧ 7 ವಿಭಾಗಗಳಿಂದ 9 ಜನ ಪತ್ರಕರ್ತರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಕ್ಕಾಗಿ ಆಯ್ಕೆ ಮಾಡಲಾಗಿರುತ್ತದೆ.
ಮುದ್ರಣ ವಿಭಾಗದಿಂದ ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಯ ಹಿರಿಯ ಸಂಪಾದಕ ನೌಶಾದ್ ಬಿಜಾಪುರ, ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರ್ತಿ ಕೀರ್ತನಕುಮಾರಿ ಕಾಸರಗೋಡು, ಎಲೆಕ್ಟ್ರಾನಿಕ್ ಮಾಧ್ಯಮ ವಿಭಾಗದಿಂದ ನ್ಯೂಸ್-18 ವರದಿಗಾರ ಚಂದ್ರಕಾಂತ ಸುಗಂಧಿ ಹಾಗೂ ಟಿ.ವ್ಹಿ-5 ವರದಿಗಾರ ಶ್ರೀಧರ ಕೋಟಾರಗಸ್ತಿ.
ಜಿಲ್ಲಾ-ಪ್ರಾದೇಶಿಕ ದಿನಪತ್ರಿಕೆ ಸಂಪಾದಕರ ವಿಭಾಗದಲ್ಲಿ ನಾಡೋಜ ದಿನ ಪತ್ರಿಕೆಯ ಸಂಪಾದಕ ಸಲೀಂ ಧಾರವಾಡಕರ, ಪತ್ರಿಕಾ ಛಾಯಾಗ್ರಾಹಕರ ವಿಭಾಗದಲ್ಲಿ ಪಿ.ಕೆ ಬಡಿಗೇರ, ಟಿ.ವಿ. ಕ್ಯಾಮೆರಾಮನ್ ವಿಭಾಗದಲ್ಲಿ ಪಬ್ಲಿಕ್ ಟಿವಿ ಕ್ಯಾಮೆರಾಮನ್ ಸುನೀಲ ಗಾವಡೆ, ತಾಲೂಕು ವರದಿಗಾರ ವಿಭಾಗದಲ್ಲಿ ರಾಯಭಾಗ ತಾಲೂಕು ವರದಿಗಾರ ಯಲ್ಲಪ್ಪ ತಳವಾರ ಹಾಗೂ ಪತ್ರಿಕಾ ವಿತರಕರ ವಿಭಾಗದಲ್ಲಿ ಖಾನಾಪುರದ ಶಿವಾನಂದ ಅನಂತರಾವ್ ವಾಗೂಡೆಕರ್ ಅವರನ್ನು ಸನ್ಮಾನಿಸಲಾಗುವುದು.
ವಿವಿಧ ಕ್ಷೇತ್ರಗಳ ಮಹನೀಯರು:
ಸಂಗೀತ ಕ್ಷೇತ್ರದಲ್ಲಿ ಬೆಳಗಾವಿಯ ನಾದ ಸುಧಾ ಸುಗಮ ಸಂಗೀತ ಶಾಲೆಯ ಸಂಸ್ಥಾಪಕ ಹಾಗೂ ಶಿಕ್ಷಕ ಎಂ.ಎನ್. ಸತ್ಯನಾರಾಯಣ, ಕೈವಲ ಭಜನಾ ಕ್ಷೇತ್ರದಲ್ಲಿ ಅಥಣಿ ತಾಲ್ಲೂಕು ದರೂರಿನ ಮಾರುತಿ ಸಿದ್ದಪ್ಪ ಸಿನಪ್ಪಗೊಳ, ಮಿಮಿಕ್ರಿ/ಸಮಾಜ ಸೇವೆಯಲ್ಲಿ ತೊಡಗಿರುವ ಬೆಳಗಾವಿ ಟಿಳಕವಾಡಿಯ ಸಂತೋಷ್ ಆರ್. ದಾಮೇಕರ, ಕ್ರೀಡಾ ವಿಭಾಗದಲ್ಲಿ ಖಾನಾಪುರ ತಾಲ್ಲೂಕಿನ ತೋಲಗಿ ಗ್ರಾಮದ ಸುನೀತಾ ದುಂಡಪ್ಪನವರ, ವೈದ್ಯಕೀಯ ವಿಭಾಗದಲ್ಲಿ ಹುಕ್ಕೇರಿ ತಾಲ್ಲೂಕಿನ ದಾದಬಾನಹಟ್ಟಿಯ ಡಾ. ಸುಕಲಾದೇವಿ ವಿರೂಪಾಕ್ಷಪ್ಪ ದುಗಾಣಿ, ಸಮಾಜ ಸೇವೆ ಕ್ಷೇತ್ರದಲ್ಲಿ ಅಥಣಿ ತಾಲ್ಲೂಕು ಕೋಳಿಗುಡ್ಡದ ಸುಶೀಲಾ ಪಾಟೀಲ, ಬೆಳಗಾವಿ ತಾಲ್ಲೂಕು ಹುದಲಿಯ ಯಲ್ಲಪ್ಪ ಹುದಲಿ, ರಾಯಬಾಗ ತಾಲ್ಲೂಕು ಕುಡಚಿಯ ಕಿರಣ ಬೇಡಿ ಹಾಗೂ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಮುರಿಗೆಪ್ಪ ಬಸಪ್ಪ ಮಾಲಗಾರ ಇವರನ್ನು ರಾಜ್ಯೋತ್ಸವದಲ್ಲಿ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.