ನವ್ಹೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಕರಾಳ ದಿನ ಆಚರಣೆಗೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರೂ
ಕರಾಳ ದಿನಾಚರಣೆ ನಡೆದೇ ನಡೆಯುತ್ತದೆ ಹಾಗೂ ಮಹಾರಾಷ್ಟ್ರ ಸರಕಾರದ ಪ್ರತಿನಿಧಿಯೊಬ್ಬರನ್ನು ಬೆಳಗಾವಿಗೆ ಕಳಿಸಲಾಗುತ್ತದೆ ಎಂದು ಮಹಾರಾಷ್ಟ್ರದ
ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ನಿನ್ನೆ ಶನಿವಾರ ಕೊಲ್ಲಾಪುರದಲ್ಲಿ
ಹೇಳಿಕೆ ನೀಡಿರುವದು ಕರ್ನಾಟಕ ಮತ್ತು
ಕನ್ನಡಿಗರ ವಿರುದ್ಧ ದಂಗೆ ಮತ್ತು
ಹಿಂಸಾತ್ಮಕ ಚಟುವಟಿಕೆಗಳಿಗೆ ನೀಡಿದ
ಪ್ರಚೋದನೆಯಾಗಿದೆ.
ರಾಜ್ಯೋತ್ಸವ ದಿನದಂದು ಕರಾಳ
ದಿನ ಆಚರಿಸುವ ಮೂಲಕ ತಮ್ಮ
ಶಕ್ತಿಹೀನ ಮಹಾರಾಷ್ಟ್ರ ಪರವಾದ
ಸಂಘಟನೆಗಳಿಗೆ ಬಲ ತುಂಬುವ ವ್ಯರ್ಥ ಪ್ರಯತ್ನ ನಡೆಸಿರುವ ಕೆಲವೇ ಕೆಲವು
ಮಹಾರಾಷ್ಟ್ರವಾದಿಗಳಿಗೆ ಪ್ರಜ್ಞಾವಂತರ
ಮತ್ತು ಮರಾಠಿಗರು ಇತ್ತೀಚಿನ
ವರ್ಷಗಳಲ್ಲಿ ಪಾಠ ಕಲಿಸಿದ್ದಾರೆ.ಮುಖ್ಯ
ವಾಹಿನಿಗೆ ಸೇರುತ್ತಿರುವ ಮರಾಠಿಗರು
ಮಹಾರಾಷ್ಟ್ರವಾದಿಗಳನ್ನು ಸಾರಾಸಗಟಾಗಿ
ತಿರಸ್ಕರಿಸಿದ್ದಾರೆ.ಈ ಹಿನ್ನೆಲೆಯಲ್ಲಿ
ಬೆಳಗಾವಿಯ ಕೈಬೆರಳಣಿಕೆಯಷ್ಟು
ಮರಾಠಿ ಮುಖಂಡರು ಕರಾಳ ದಿನ ಆಚರಣೆಯ ಬಗ್ಗೆ ಹೇಳಿಕೆ ನೀಡುವದನ್ನು
ಕನ್ನಡಿಗರು ಅರ್ಥ ಮಾಡಿಕೊಳ್ಳಬಹುದು.
ಆದರೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳೇ
ಕರಾಳ ದಿನಾಚರಣೆ ನಡೆದೇ ನಡೆಯುತ್ತದೆ
ಎಂದು ಹೇಳಿಕೆ ನೀಡುವದು ಅಚ್ಚರಿ
ಮತ್ತು ಆಘಾತಕಾರಿ ಸಂಗತಿಯಾಗಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿಗಳು
ಪ್ರಚೋದನಾತ್ಮಕ ಹೇಳಿಕೆ ನೀಡಿ
24 ಗಂಟೆಗಳಾದರೂ ಕರ್ನಾಟಕ ಸರಕಾರದ ಯಾವೊಬ್ಬ ಪ್ರತಿನಿಧಿಯೂ ಖಂಡಿಸದೇ
ಇರುವದೂ ಗಡಿ ಕನ್ನಡಿಗರಿಗೆ ಆಘಾತ
ಉಂಟು ಮಾಡಿದೆ.
ಕರಾಳ ದಿನಾಚರಣೆಗೆ ಮಹಾರಾಷ್ಟ್ರದ
ನಾಯಕರು ಬರದಂತೆ ಬೆಳಗಾವಿ
ಜಿಲ್ಲಾಡಳಿತ ಎಚ್ಚರ ವಹಿಸಬೇಕು.ಬರುವ
ಪ್ರಯತ್ನ ಮಾಡಿದರೆ ಅವರನ್ನು
ಬಂಧಿಸಿ ಹಿಂಡಲಗಾ ಕಾರಾಗೃಹಕ್ಕೆ
ಅಟ್ಟಬೇಕು.
*ಅಶೋಕ ಚಂದರಗಿ*
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ