ಬೆಳಗಾವಿ: ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಪ್ರಕರಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಬೆಳಗಾವಿ ಜಂಟಿ ಆಯುಕ್ತೆ ದಾಕ್ಷಾಯಿನಿ ಚೌಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ವಿಕಾಸ ಕಂಪೋಸಿಟ್ಸ್ ಆಟೋ ನಗರ ಬೆಳಗಾವಿ ವಿಕಾಸ ಪ್ರಮೋದ ಕೋಕಣೆ ಎಂಬುವವರು ಲೋಕಾಯುಕ್ತರಿಗೆ ದೂರು ನೀಡಿದ್ದರು.
‘ಸಿ’ ಫಾರ್ಮ್ ಸಲ್ಲಿಸದ ಹಿನ್ನಲೆಯಲ್ಲಿ ಇಲಾಖೆಯಿಂದ ಸೀಸರ್ ನೋಟೀಸ್ ಪಡೆದಿದ್ದ ದೂರುದಾರ ವಿಕಾಸ ಕೋಕಣೆ ಅವರು ₹41ಸಾವಿರ ಹಣ ಕಟ್ಟಿದ್ದರು. ನಂತರ ಸದರಿ ಸಿ ಫಾರ್ಮ್ ಸ್ಟೇಟ್ ಜಿಎಸ್ಟಿ ಇಲಾಖೆಗೆ ಸಲ್ಲಿಸಿದ ಬಳಿಗೆ 41 ಸಾವಿರ ಹಣ ಮರಳಿ ಪಡೆಯಲು ದೂರುದಾರನ ಬಳಿ ಮಹಿಳಾ ಅಧಿಕಾರಿ ₹25ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇಂದು ದೂರುದಾರರಿಂದ ರೂ. 25ಸಾವಿರ ಲಂಚ ಪಡೆಯುತ್ತಿದ್ದ ಮಹಿಳಾ ಅಧಿಕಾರಿಯನ್ನು ಲೋಕಾಯುಕ್ತರು ಬಲೆಗೆ ಕೆಡವಿದ್ದಾರೆ. ಇನ್ಸಪೆಕ್ಟರ್ ನಿರಂಜನ ಪಾಟೀಲ ನೇತೃತ್ವದ ತಂಡ ದಾಳಿ ನಡೆಸಿತು. ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ಮಾರ್ಗದರ್ಶನ ನೀಡಿದ್ದರು.
ಸರಕಾರಕ್ಕೆ ಆದಾಯ ಆಕರಣೆ ಮಾಡಿಕೊಡುವ ಮಹತ್ವದ ಜವಾಬ್ದಾರಿ ಹೊಂದಿರುವ ಈ ಲೇಡೊ ತಾನೇ ಗುಳುಂ ಮಾಡಿದರೆ ಹೆಂಗೆ ಎಂದು ಸಾರ್ವಜನಿಕರು ವಿಸ್ಮಿತರಾಗಿದ್ದಾರೆ.