ಬೆಳಗಾವಿ: ಶಿಕ್ಷಣ ಸಂಸ್ಥೆಯೊಂದರಿಂದ 40 ಸಾವಿರ ಹಣ ಪೀಕುತ್ತಿದ್ದಾಗ ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ ಇಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಿತ್ತೂರು ತಾಲೂಕು ತುರಮರಿಯ ವಿಶ್ವ ವಿಧ್ಯಾ ಚೇತನ ಹೈಯರ್ ಪ್ರೈಮರಿ ಶಾಲೆಯ ಮುಖ್ಯ ಶಿಕ್ಷಕ ಅರ್ಜುನ ಕುರಿ ಎಂಬುವವರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಶಾಲಾ ವಾರ್ಷಿಕ ಮರುಅನುಮತಿಗಾಗಿ 40 ಸಾವಿರಕ್ಕೆ ಡಿಡಿಪಿಐ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕ್ಲಾಸ್ ಒನ್ ಅಧಿಕಾರಿ ಆಗಿರುವ ಡಿಡಿಪಿಐ ಲಂಚ ಪಡೆಯುವ ಘಟನೆ ಸಮಾಜದಲ್ಲಿ ನಾಚಿಕೆ ಬರಿಸುವ ವಿಷಯವಾಗಿದೆ. ಡಿಡಿಪಿಐ ಬಸವರಾಜ ನಾಲವಾಡ ಅವರನ್ನು ಲೋಕಾಯುಕ್ತ ಪೊಲೀಸರು ಹಣದ ಸಮೇತ ವಶಕ್ಕೆ ಪಡೆದಿದ್ದು, ಕ್ರೈಂ ನಂ:12/2023 u/s7(a) PC act 1988 ಅಡಿ ಪ್ರಕರಣ ದಾಖಲಾಗಿದೆ.
ಇನ್ಸಪೆಕ್ಟರ್ ಉಸ್ಮಾನ್ ಅವಟಿ ಮತ್ತು ನಿರಂಜನ ಪಾಟೀಲ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್ ತಂಡ ದಾಳಿ ನಡೆಸಿತು.