ಬೆಂಗಳೂರು : ಡಿಸೆಂಬರ್ 4ರಿಂದ ಡಿಸೆಂಬರ್ 15 ರವರೆಗೆ ರಾಜ್ಯ ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಸುವುದಾಗಿ ನಿರ್ಧಾರ ಕೈಗೊಳ್ಳಲಾಯಿತು.
ಡಿಸೆಂಬರ್ 3 ರಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬೀಳಲಿದೆ. ಈ ಬೆನ್ನಲ್ಲೇ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್ 15 ರ ನಂತರ ಶೂನ್ಯ ಮಾಸ ಕಾರಣ ಈ ದಿನಗಳಲ್ಲಿ ಸರ್ಕಾರ ಅಧಿವೇಶನ ನಡೆಸಲ್ಲ. ಇನ್ನು ನವೆಂಬರ್ ನಲ್ಲಿ ದೀಪಾವಳಿ ರಜೆ, ಕನಕ ಜಯಂತಿ ಇರುವುದರಿಂದ ಅಧಿವೇಶನ ನಡೆಸಲು 10 ದಿನಗಳು ಸಿಗಲ್ಲ. ಈ ಎಲ್ಲಾ ಕಾರಣಗಳಿಂದ ಡಿಸೆಂಬರ್ 4 ರಿಂದ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.