ಬೆಳಗಾವಿ :
ಅಟಲ್ ಪಿಂಚಣಿ ಯೋಜನೆ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಿಳಿಸಿಕೊಡುವ ಕಾರ್ಯಕ್ರಮವನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ ಹಾಗೂ ಬೆಳಗಾವಿ ಜಿಲ್ಲಾ ಅಗ್ರಣೀಯ ಬ್ಯಾಂಕ್, ಕೆನರಾ ಬ್ಯಾಂಕ್ ಇವರ ಸಹಯೋಗದೊಂದಿಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕ್ಷೇತ್ರೀಯ ಕಛೇರಿ ಕಾರ್ಯಕ್ರಮವನ್ನು ಎಂ ರಂಗಪ್ಪ ಎಜಿಎಂ ಅವರು ಉದ್ದೇಶಿಸಿ ಮಾತನಾಡಿದರು.
ಸಹಾಯಕ ವ್ಯವಸ್ಥಾಪಕ ಪಿಎಫ್ಆರ್ಡಿಎ ನವದೆಹಲಿ ಈಶ್ವರ ದತ್ತ ನಿರ್ಮ¯ ಅಟಲ್ ಅವರು ಪಿಂಚಣಿ ಯೋಜನೆ ಕುರಿತು ಮಾಹಿತಿ ನಿಡಿದರು. ಬೆಳಗಾವಿ ಜಿಲ್ಲಾ ಜಂಟಿ ನಿರ್ದೇಶಕರು ಕೈಗಾರಿಕಾ ಕೇಂದ್ರ ಸತ್ಯನಾರಾಯಣ ಭಟ್, ಗೋಕಾಕ್ ಎಜಿಎಂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕ್ಷೇತ್ರೀಯ ಕಛೇರಿ ಸಂತೋಷ ನರಗುಂದ, ಅರುಣ್ ಕುಮಾರ್ ಬೆಳಗಾವಿ, ಝಾ ಎಜಿಎಂ ಬ್ಯಾಂಕ್ ಆಫ್ ಇಂಡಿಯಾ ಶಹಾಪುರ ಶಾಖೆಯ ಅರುಣ್ ಕುಮಾರ್,ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಬೆಂಗಳೂರಿನ ವಿದ್ಯಾ ಎಂ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಈ ಆರ್ಥಿಕ ವರ್ಷದ ಮೊದಲ ಅರ್ಧವಾರ್ಷಿಕ ದಲ್ಲಿ ಅಟಲ್ ಪಿಂಚಣಿ ಯೋಜನೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕೆವಿಜಿಬಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಗಳನ್ನೂ ಸತ್ಕರಿಸಲಾಯಿತು. ಗೀತಾ ಖಾನಪೇಟ ನಿರೂಪಿಸಿದರು, ಜಿಲ್ಲಾ ಅಗ್ರಣೀಯ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಕುಲಕರ್ಣಿ ಸ್ವಾಗತಿಸಿದರು, ಮಾರುತಿ ಶ್ರೀನಿವಾಸಲು ಪ್ರಾಸ್ತಾವಿಕ ಭಾಷಣ ಮಾಡಿದರು. ವ್ಯವಸ್ಥಾಪಕ ಸಂಜೀವ ವಂಜೇರಿ ಉಪಸ್ಥಿತರಿದ್ದರು.