ಬೆಳಗಾವಿ :
ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಆರೋಗ್ಯ ಮತ್ತು ಕು.ಕ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಘಟಕ ಬೆಳಗಾವಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಕಛೇರಿ ಸಂಭಾಣಗದಲ್ಲಿ “ತಂಬಾಕು ಉತ್ಪನ್ನಗಳ ಮಾರಾಟ ಪರವಾನಿಗೆ ನೀತಿ ಅನುಷ್ಠಾನ ಮತ್ತು ಕೋಟ್ಪಾ-೨೦೦೩ ರ ಕಾಯ್ದೆ ಪರಿಣಾಮಕಾರಿ ಅನುಷ್ಠಾನದ” ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೋಳ್ಳಲಾಯಿತು.
ಕಾರ್ಯಾಗಾರವನ್ನು ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ, ಉಪ ಮೇಯರ್ ರೇಶ್ಮಾ ಪಾಟೀಲ ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ಶ್ರೀಯನ್ ನಾಕಾಡಿ, ರೇಖಾ ಹೂಗಾರ, ರವಿ ಸಾಳುಂಕೆ, ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಸಂಜಯ ನಾಂದ್ರೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು/ಕಾರ್ಯಕ್ರಮಧಿಕಾರಿ ಡಾ.ಎಸ್.ಎಸ್. ದೊಡ್ಡಮನಿ ಇವರ ಉಪಸ್ಥಿತಿಯಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಮಹಾನಗರ ಪಾಲಿಕೆಯ ನಗರ ಸೇವಕ ಹನುಮಂತ ಕೊಂಗಾಲಿ ಮಾತನಾಡಿ, ಕೋಟ್ಪಾ ಕಾಯ್ದೆ ಅನುಷ್ಠಾನಗೊಳಿಸಿ ಬೆಳಗಾವಿ ಮಹಾನಗರ ಪಾಲಿಕೆಯನ್ನು ತಂಬಾಕು ಮುಕ್ತವನ್ನಾಗಿಸಲು ಎಲ್ಲರು ಕೈಜೋಡಿಸಬೆಕೆಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು,ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಡಾ. ಎಸ್.ಎಸ್. ದೊಡ್ಡಮನಿ ಇವರು ಪ್ರಾಸ್ತಾವಿಕ ನುಡಿಯನ್ನು ಮಾತನಾಡಿ,
ತಂಬಾಕು ಸೇವನೆಯಿಂದ ತಲೆಯಿಂದ ಕಾಲಿನ ವರೆಗೆ ಪ್ರತಿಒಂದು ಅಂಗಾಂಗದ ಮೇಲೆ ಪರಿಣಾಮ ಬೀರಿ ನಾನಾ ಪ್ರಕಾರದ ರೋಗಗಳಿಗೆ ಅತಿ ಬೇಗ ಯುವ ಪೀಳಿಗೆ ವಿಷಯ ಕಾರ್ಯಾಗಾರಕ್ಕೆ ತಿಳಿಸುತ್ತಾ ತಂಬಾಕು ಉತ್ಪನ್ನಗಳು ಅತಿ ಸುಲಭವಾಗಿ ಲಭ್ಯವಾಗುತ್ತಿರುವುದು ಇಂದಿನ ಸಮಾಜಕ್ಕೆ ಆತಂಕಕಾರಿ ವಿಷಯ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಪರವಾನಿಗೆ ನೀತಿ ಅನುಷ್ಠಾನ ಮತ್ತು ಕೋಟ್ಪಾ ೨೦೦೩ ರ ಕಾಯ್ದೆ ಪರಿಣಾಮಕಾರಿ ಅನುಷ್ಠಾನದ ಮಾಡಬೆಕೆಂದು ತಿಳಿಸಿದರು.
ಬೆಂಗಳೂರು ರಾಜ್ಯ ತಂಬಾಕು ನಿಯಂತ್ರಣ ಘಟಕ ವಿಬಾಗೀಯ ಸಂಯೋಜಕ ಮಹಾಂತೇಶ ಉಳ್ಳಾಗಡ್ಡಿ ಇವರು ಕೋಟ್ಪಾ ಕಾಯ್ದೆಯ ಸೆಕ್ಷನ್ ೪,೫.೬(ಎ) ೬(ಬಿ) ಹಾಗೂ ೭ರ ವಿವರಣೆ ಹಾಗೂ ಪರಿಣಾಮಕಾರಿ ಅನುಷ್ಠಾನದ ಕುರಿತು ಉಪನ್ಯಾಸ ನೀಡಿದರು.
ರಾಜ್ಯ ತಂಬಾಕು ನಿಯಂತ್ರಣ ಘಟಕ ಬೆಂಗಳೂರು ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಅವರು ತಂಬಾಕು ಉತ್ಪನ್ನ ಉದ್ಯಮ ಪರವಾನಿಗೆ ನೀತಿ ಅನುಷ್ಠಾನದ ಕುರಿತು ಸರಕಾರದ ಆದೇಶ ಹಾಗೂ ಮಾರ್ಗಸೂಚಿಯ ಅನುಷ್ಠಾನ ಕುರಿತು ಉಪನ್ಯಾಸ ನೀಡಿದರು.
ಕಾರ್ಯಾಗಾರವು ನಗರ ಸೇವಕರಾದ ಶ್ರೀಯನ್ ನಾಕಾಡಿ, ರೇಖಾ ಹೂಗಾರ, ರವಿ ಸಾಳುಂಕೆ, ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಎಸ್. ನಾಂದ್ರೆ ಹಾಗೂ ಜಿಲ್ಲಾ ಸಲಹೆಗಾರರಾದ ಡಾ.ಶ್ವೇತಾ ಪಾಟೀಲ, ಕವಿತಾ ರಾಜನ್ನವರ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು ಉಪಸ್ಥಿತರಿದ್ದರು.