ಜೊಲ್ಲೆ ದಂಪತಿಗಳಿಬ್ಬರ ಇದೀಗ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅದರಲ್ಲೂ ದಾಂಡಿಯಾ ರಾಸ್ ನಲ್ಲಿ ಇಬ್ಬರು ಕುಣಿದು ಕುಪ್ಪಳಿಸಿ
ಜನತೆಗೆ ಮನರಂಜನೆ ಒದಗಿಸಿದ ಈ ದಂಪತಿ ವಿಶೇಷ ವೇಷ ಭೂಷಣಗಳಿಂದ ಎಲ್ಲರ ಮನಗೆದ್ದರು.
ನಿಪ್ಪಾಣಿ :
ಇದೀಗ ನವರಾತ್ರಿ ಸಂಭ್ರಮ. ಎಲ್ಲೆಡೆ ದಾಂಡಿಯಾದ್ದೇ ಸದ್ದು. ಅದರಲ್ಲೂ ರಾಜಕಾರಣಿಗಳಂತೂ ಜನರ ಮಧ್ಯೆ ಕುಣಿದು ಕುಪ್ಪಳಿಸುತ್ತಿದ್ದಾರೆ.
ರಾಜ್ಯದ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಅವರ ಪತಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು ಜತೆಜತೆಯಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಹಾಕಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ದಸರಾ ಹಬ್ಬದ ಪ್ರಯುಕ್ತ ಜೊಲ್ಲೆ ಗ್ರೂಪ್ ವತಿಯಿಂದ ಹಮ್ಮಿಕೊಂಡ ದಾಂಡಿಯಾ ರಾಸ್ ನಲ್ಲಿ ಇವರು ಕುಣಿದಾಡಿ ಜನತೆಯ ಮನರಂಜಿಸಿದ್ದಾರೆ.
ನಿಪ್ಪಾಣಿಯ ಸಿಬಿಎಸ್ಸಿ ಶಾಲಾ ಮೈದಾನದಲ್ಲಿ ನಡೆದ ದಾಂಡಿಯಾ ರಾಸ್ ನಲ್ಲಿ ಇಬ್ಬರು ಹೆಜ್ಜೆ ಹೆಜ್ಜೆ ಹಾಕಿದ್ದಾರೆ.
ಶಶಿಕಲಾ ಜೊಲ್ಲೆ ಮಾತನಾಡಿ, ನಿಪ್ಪಾಣಿಯಲ್ಲಿ ನಡೆಯುತ್ತಿರುವ ದಾಂಡಿಯಾ ರಾಸ್ ಗೆ ನಿಪ್ಪಾಣಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಣಿದಿರುವುದು ವಿಶೇಷ. ದೇಶದ ಸಂಸ್ಕೃತಿಯ ಪ್ರತೀಕ ವಾಗಿರುವ ದಾಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ನನಗೂ ತುಂಬಾ ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದರು.