ಹಂದಿಗನೂರ ಪಂಚಾಯಿತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮನೆಗಳ ಮಂಜೂರು..?
ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ತಾಂಡವಾಡುತ್ತಿರುವ ಭ್ರಷ್ಟಾಚಾರ ..?
ಬರಗಾಲದಲ್ಲೂ ಬಿದ್ದ 43 ಮನೆಗಳು; 1 ಲಕ್ಷ ಕೊಟ್ಟರೆ 5 ಲಕ್ಷ ಸ್ಕೀಮ್ ಪಕ್ಕಾ..?
ತಲಾಠಿ, RI ಸಹಿ ಇಲ್ಲದೆ ನೇರವಾಗಿ ಫೈಲ್ ಹಾಕಿದವರ್ಯಾರು..?
ಭ್ರಷ್ಟಾಚಾರಿಗಳಿಂದ 6ನೇ ಗ್ಯಾರಂಟಿ ಯೋಜನೆ ಘೋಷಣೆ..?
ವರದಿ: ಅಶೋಕ ಮುದ್ದಣ್ಣ ವರ
ಬೆಳಗಾವಿ : ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲು 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಒಂದೊಂದಾಗಿ ಜಾರಿಗೆ ಮಾಡುತ್ತಿದೆ. ಆದರೆ ಬೆಳಗಾವಿ ಜಿಲ್ಲೆ, ಬೆಳಗಾವಿ ತಾಲೂಕಿನ ಯಮಕನಮರಡಿ ಕ್ಷೇತ್ರದಲ್ಲಿನ ಹಂದಿಗನೂರ ಗ್ರಾಮ ಪಂಚಾಯಿತಿ ಕೆಲ ಭ್ರಷ್ಟ ಮರಿ ಪುಢಾರಿಗಳು ಕಾಂಗ್ರೇಸ್ ಸರ್ಕಾರಕ್ಕೆ ಶೆಡ್ಡು ಹೊಡೆದು 6 ನೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಅದು ಏನೆಂದರೆ ಜನರು 1 ಲಕ್ಷ ರೂ ಕೊಟ್ಟರೆ ಅವರಿಗೆ 5 ಲಕ್ಷ ರೂ ಮನೆಯ ಸ್ಕೀಮ್ ಹಾಕಿ ಕೊಡುವುದು. ಇದರಿಂದಾಗಿ ಬೆಳಗಾವಿ ತಾಲೂಕಿನಲ್ಲಿ ಅತಿವೃಷ್ಟಿಯಲ್ಲಿ ಹಾನಿಗೊಳಗಾಗಿ ಅರ್ಜಿ ಸಲ್ಲಿಸಿ ಅನುಮೋದನೆಯಾಗಿರುವ ಮನೆಗಳ ಸಂಖ್ಯೆಯಲ್ಲಿ 75% ಮನೆಗಳು ಯಮಕನಮರಡಿ ಕ್ಷೇತ್ರದಲ್ಲಿವೆ ಎಂದು ಸಂಖ್ಯೆಗಳ ಪ್ರಕಾರ ತಿಳಿದು ಬಂದಿದೆ.
ಏನಿದು 5 ಲಕ್ಷ ಸ್ಕೀಮ್..?
2019 ರಲ್ಲಿ ಭಾರಿ ಮಳೆಯಿಂದ ಉಂಟಾದ ಅತೀವೃಷ್ಟಿಯಿಂದಾಗಿ ರಾಜ್ಯದಲ್ಲಿ ಸಾವಿರಾರು ಮನೆಗಳು ಬಿದ್ದು ಜನಜೀವನ ಅಸ್ತವ್ಯಸ್ತವಾಗಿತ್ತು. ಆ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು A& B reconstruction ಗೆ 5 ಲಕ್ಷ ,B ವರ್ಗದಲ್ಲಿ ನವಿಕರಣಕ್ಕೆ 3ಲಕ್ಷ ಹಾಗೂ C ವರ್ಗದಲ್ಲಿ 50 ಸಾವಿರ ರೂ ಘೋಷಣೆ ಮಾಡಿ ಜಾರಿಗೆ ತಂದಿದ್ದರು. ಆವಾಗ ಇದನ್ನೆ ಬಂಡವಾಳನ್ನಾಗಿ ಮಾಡಿಕೊಂಡ ಹಂದಿಗನೂರ ಪಂಚಾಯಿತಿಯ ಅಕ್ಕಪಕ್ಕದ ಗ್ರಾಮದಲ್ಲಿನ ಕೆಲ ಭ್ರಷ್ಟಾಚಾರಿ ಸದಸ್ಯರು ಕ್ಷೇತ್ರದ MLA ಸತೀಶ ಜಾರಕಿಹೊಳಿ ಹೆಸರು ಹೇಳಿಕೊಂಡು ಅಧಿಕಾರಿಗಳನ್ನು ಹೆದರಿಸಿ, ಜನರನ್ನು ಯಾಮಾರಿಸಿ ಬಿದ್ದು, ಬಿಳದ ಮನೆಗಳಲ್ಲಿ ಕಮೀಷನರ್ ಧಂಧೆ ಆರಂಭಿಸಿದರು. ಇಷ್ಟಕ್ಕೆ ಸುಮ್ಮನಾಗದೆ ರಾತೋರಾತ್ರಿ ಜೆಸಿಬಿಯಿಂದ 25 ಕ್ಕೂ ಹೆಚ್ಚು ಮನೆಗಳನ್ನು ಉರುಳಿಸಿ ಅವರಿಂದ ತಲಾ ಒಂದೊಂದು ಲಕ್ಷ ರೂ ವಸೂಲಿ ಮಾಡಿ ಸ್ಥಳಿಯ ತಲಾಠಿ ಹಾಗೂ ಕಂದಾಯ ನಿರೀಕ್ಷಕರ ಸಹಿ ಇಲ್ಲದೆ ತಹಶಿಲ್ದಾರ ಕಛೇರಿಯಲ್ಲಿನ ಸಿಬ್ಬಂದಿಗಳೊಂದಿಗೆ ನೇರವಾಗಿ ಡೀಲ್ ಮಾಡಿಕೊಂಡು ಮನೆಗಳ ಅನುಮೊದನೆ ಮಾಡಿಸಿದರು.
ಅಬ್ಬಬ್ಬಾ…ಬರಗಾಲದಲ್ಲೂ ಬಿದ್ದಿವೆ 43 ಮನೆಗಳು..?
2019, 20, 21, 22 ರಲ್ಲಿ ಮುಂಗಾರು ಮಳೆಗಾಲ ಚಿನ್ನಾಗಿತ್ತು. ಕೆಲವೊಮ್ಮೆ ಧಾರಕಾರವಾಗಿ ಸುರಿದಿತ್ತು. ಇದರಿಂದ ಕೆಲ ಮನೆಗಳು ಉರುಳಿದ್ದವು. ಆದರೆ ಈ ವರ್ಷ ಸಂಪೂರ್ಣ ಬರಗಾಲವಿದ್ದು, ಕುಡಿಯಲು ನೀರು ಸಹ ಸಿಗುತ್ತಿಲ್ಲ. ಅಂತಹದರಲ್ಲಿ ಕೆವಲ ಒಂದೇ ಪಂಚಾಯಿತಿಯಲ್ಲಿ 43 ಮನೆಗಳು ಹೇಗೆ ಬಿದ್ದವು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇದರ ಹಿಂದೆ ಲಕ್ಷಾಂತರ ರೂ ಲೂಟಿ, ಭ್ರಷ್ಟಾಚಾರ ಸಚಿವರ ಆಪ್ತರೆಂದು ಹೇಳುವ ಮರಿ ಪುಢಾರಿಗಳು ಹಾಗೂ ತಹಶಿಲ್ದಾರ ಕಛೇರಿ ಅಧಿಕಾರಿಯ ಕೈವಾಡವರುವುದಾಗಿ ತಿಳಿದು ಬಂದಿದೆ.
ಕ್ರಮ ಕೈಗೊಳ್ಳುವರ್ಯಾರು..?
ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾಗಿರುವ ಸತೀಶ ಜಾರಕಿಹೋಳಿ ಅವರು
ಸ್ವಂತ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಭ್ರಷ್ಟಾಚಾರ ನಡೆದಿದೆ. ಅದಲ್ಲದೆ ಅಸಲಿ ಫಲಾನುಭವಿಗಳನ್ನು ಬಿಟ್ಟು ನಕಲಿ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಿದ್ದು ಎಂಬ ಆಕ್ರೋಶ ಹಂದಿಗನೂರ ಪಂಚಾಯಿತಿಯಲ್ಲಿ ಭುಗಿಲೆದ್ದಿರುವ ಬಗ್ಗೆ ಅವರ ಗಮನಕ್ಕೆ ತಂದಿದ್ದಾರೆ. ಈಗ ಅವರು ಯಾರ ಪರ ನಿಂತು ಕ್ರಮ ಕೈಗೊಳ್ಳುವರು ನೋಡಬೇಕು.
ಖಡಕ ಅಧಿಕಾರಿ ಎಂದು ಹೆಸರುವಾಸಿಯಾಗಿರುವ ಬೆಳಗಾವಿ ಡಿಸಿ ನಿತೇಶ ಪಾಟೀಲ ಹಂದಿಗನೂರ ಪಂಚಾಯಿತಿಯಲ್ಲಿ ನಕಲಿ ಫಲಾನುಭವಿಗಳಿಗೆ ಕಾನೂನು ಬಾಹಿರವಾಗಿ ಮನೆಗಳನ್ನು ಮಂಜೂರು ಮಾಡಿರುವ ತಹಶಿಲ್ದಾರ ಕಛೇರಿ ಮೇಲೆ ಯಾವ ಕ್ರಮ ಕೈಗೊಳ್ಳುವರು ಎಂದು ನೋಡಬೇಕು.
ಇವರು ಕ್ರಮ ಸರ್ಕಾರ ಮತ್ತು ಆಡಳಿತದ ಮೇಲೆ ಜನರ ಇಡುವ ಭರವಸೆಯ ಪ್ರಶ್ನೆಯಾಗಿದೆ.